ಮಂಡ್ಯದ ಮೂಲದ ಪಾವನಾ ಎಂಬ ಯುವತಿಯೊಂದಿಗೆ ನಟ ಚಿಕ್ಕಣ್ಣ ಅವರ ನಿಶ್ಚಯ ನಡೆದಿದೆ. ಮಹದೇವಪುರ ಗ್ರಾಮದ ಪಾವನಾ ಮತ್ತು ಚಿಕ್ಕಣ್ಣ ಜೋಡಿಯ ಫೋಟೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮದುವೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ, ಆದರೆ ಈಗಾಗಲೇ ಶುಭಾಶಯಗಳ ಸರಮಾಲೆಯೇ ಹರಿದು ಬರುತ್ತಿದೆ.2024ರಲ್ಲಿ ಬಿಡುಗಡೆಯಾದ ‘ಉಪಾಧ್ಯಕ್ಷ’ ಚಿತ್ರದ ಮೂಲಕ ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಪರದೆ ಮೇಲೆ ಕಾಣಿಸಿಕೊಂಡು ಯಶಸ್ಸು ಕಂಡರು. ಇದರಿಂದ ಅವರು ಕೇವಲ ಹಾಸ್ಯನಟನಲ್ಲ, ಸಂಪೂರ್ಣ ನಾಯಕನಾಗಿ ಸಹ ತಮಗೆ ಸವಾಲು ಹಾಕಿಕೊಳ್ಳಬಲ್ಲರು ಎಂಬುದನ್ನು ಸಾಬೀತುಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

