ಕಮಲಾಪುರದಲ್ಲಿ 7 ವರ್ಷದ ಬಾಲಕನನ್ನು ಶಾಲೆಗೆ ಬಿಡುವುದಾಗಿ ನಂಬಿಸಿ ಸ್ಕೂಟಿಯಲ್ಲಿ ಕರೆದೊಯ್ದು ಕಾಲುವೆಗೆ ಎಸೆದು ಕೊಲೆ ಮಾಡಿದ ಪ್ರಕರಣದಲ್ಲಿ ಒಬಳೇಶ (24) ಎಂಬಾತನಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹65 ಸಾವಿರ ದಂಡ ವಿಧಿಸಿದೆ. 2024ರ ಅಕ್ಟೋಬರ್ 22ರಂದು ಬಾಲಕ ಅಭಿಯನ್ನು ಕರೆದೊಯ್ದಿದ್ದ ಒಬಳೇಶ, ಎಚ್‌ಎಲ್‌ಸಿ ಕಾಲುವೆಯ ಸೇತುವೆಯಿಂದ ಮಗುವನ್ನು ನೀರಿಗೆ ಎಸೆದು ಕೊಲೆ ಮಾಡಿದ್ದ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ರಾಜೇಶ ಬಟಗುರ್ಕಿ ನೇತೃತ್ವದ ತಂಡ ತನಿಖೆ ನಡೆಸಿ ಸಾಕ್ಷ್ಯಾಧಾರಗಳೊಂದಿಗೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ಬಳಿಕ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಯಶಸ್ವಿ ತನಿಖೆ ನಡೆಸಿದ ಪೊಲೀಸರನ್ನು ಎಸ್‌ಪಿ ಎಸ್. ಜಾಹ್ನವಿ ಅಭಿನಂದಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
