Breaking News

ಹೇ ಧನಂಜಯ ಬಾರೋ ಇಲ್ಲಿಗೆ; ಮಸೀದಿ ಎದುರು ಇನ್ಸ್‌ಪೆಕ್ಟರ್‌ಗೆ ಏಕವಚನದಲ್ಲೇ ತರಾಟೆ ತಗೆದುಕೊಂಡ ಪ್ರತಾಪ್ ಸಿಂಹ!

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮಸೀದಿ ಮುಂಭಾಗದಲ್ಲಿ ಮಾತನಾಡುವ ವೇಳೆ ಸ್ಥಳೀಯ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರಿಯ ಹೇಳಿಕೆಗಳನ್ನು ಖಂಡಿಸಿ ಏಕವಚನದಲ್ಲಿ ಸವಾಲು ಹಾಕಿದ್ದಾರೆ. ಭಾಷಣದ ವೇಳೆ, “ಇನ್ನೂ ಒಂದುವರೆ ವರ್ಷ ಬಿಟ್ಟು ನಾವೇ ಅಧಿಕಾರಕ್ಕೆ ಬರ್ತೀವಿ. ಆಗ ಈ ಧನಂಜಯನ ಲೆಕ್ಕ ಚುಕ್ತಾ ಮಾಡ್ತೀವಿ” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಪೊಲೀಸ್ ಅಧಿಕಾರಿಗೆ ಬಹಿರಂಗವಾಗಿ ಬೆದರಿಕೆ ಹಾಕಿರುವ ಆರೋಪದ ಬಗ್ಗೆಯೂ ಚರ್ಚೆ ನಡೆದಿದೆ.

Share News

About BigTv News

Check Also

ಪೊಲೀಸ್‌‍ ಖೆಡ್ಡಾಕ್ಕೆ ಬಿದ್ದ 10 ಲಕ್ಷ ಕೊಟ್ಟರೆ ಒಂದು ಕೋಟಿ ಮಾಡುವುದಾಗಿ ವಂಚಿಸುತ್ತಿದ್ದ ಖತರ್ನಾಕ್‌ ಗ್ಯಾಂಗ್‌

ಬೆಂಗಳೂರು: ₹10 ಲಕ್ಷ ನೀಡಿದರೆ ₹1 ಕೋಟಿ ನೀಡುವುದಾಗಿ ನಂಬಿಸಿ, ಮೂಟೆಗಳಲ್ಲಿ ಹಣ ತೋರಿಸಿ ಹಲವರಿಂದ ₹4.5 ಕೋಟಿಗೂ ಅಧಿಕ …

Leave a Reply

Your email address will not be published. Required fields are marked *