Breaking News

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಶಿಕ್ಷಕ ಎಸ್‌ಪಿ ಕಚೇರಿಯಲ್ಲಿ ಆತ್ಮಹತ್ಯೆ

ರಾಮನಗರ: ಪೋಕ್ಸೊ ಪ್ರಕರಣದ ಆರೋಪ ಎದುರಿಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಶಶಿಧರ್ (49) ಅವರು ಭಾನುವಾರ ಬೆಳಗ್ಗೆ ಜಿಲ್ಲಾ ಎಸ್‌ಪಿ ಕಚೇರಿಯ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಶಾಲೆಯ ಕೆಲ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ರಾಮನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಶಿಧರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮುನ್ನ ವೈದ್ಯಕೀಯ ತಪಾಸಣೆ ಹಾಗೂ ಬೆರಳಚ್ಚು ಪಡೆಯಲು ಎಸ್‌ಪಿ ಕಚೇರಿಗೆ ಕರೆತರಲಾಗಿತ್ತು. ಈ ವೇಳೆ ಕಾನ್‌ಸ್ಟೆಬಲ್ ಅವರನ್ನು ತಳ್ಳಿ ಕೆಳಗೆ ಜಿಗಿದಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Share News

About BigTv News

Check Also

ಬೆಳಗಾವಿ ದಮೋನೆ ಫ್ಯಾಮಿಲಿ ದುರಂತದ ಟ್ವಿಸ್ಟ್: 6 ಜನರ ಸಾವಿಗೆ ಫ್ರಿಡ್ಜ್ ಬ್ಲಾಸ್ಟ್ ಕಾರಣವಲ್ಲ, CCTV ವಿಡಿಯೋ ಸಂದೇಹ!

ಬೆಳಗಾವಿ: ಚವಾಟ್‌ಗಲ್ಲಿಯಲ್ಲಿ ಸೆ.16ರಂದು ಒಂದೇ ಕುಟುಂಬದ 6 ಮಂದಿ ಮೃತಪಟ್ಟ ಅಗ್ನಿ ದುರಂತ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಘಟನೆಗೂ …

Leave a Reply

Your email address will not be published. Required fields are marked *