ಬೆಂಗಳೂರು: ಕೊತ್ತನೂರಿನ ಶಬರಿನಗರದಲ್ಲಿ ಕುಟುಂಬಗಳ ನಡುವಿನ ಗಲಾಟೆಯಲ್ಲಿ 6 ತಿಂಗಳ ಗರ್ಭಿಣಿ ತಾನಿಯಾ ಸಿದ್ದಿಕಿಗೆ ತೀವ್ರವಾಗಿ ಪೆಟ್ಟು ಬಿದ್ದಿದ್ದು, ಗರ್ಭದಲ್ಲಿದ್ದ ಅವಳಿ ಮಕ್ಕಳು ಮೃತಪಟ್ಟಿದ್ದಾರೆ. ಬೈಕ್ ವಿಚಾರಕ್ಕೆ ಆರಂಭವಾದ ಜಗಳ ಸೆ.6ರಂದು ಮಾರಾಮಾರಿಗೆ ತಿರುಗಿತ್ತು. ಈ ವೇಳೆ ತಾನಿಯಾಗೆ ಪೆಟ್ಟು ಬಿದ್ದ ಪರಿಣಾಮ ಅವಳಿ ಮಕ್ಕಳು ಗರ್ಭದಲ್ಲೇ ಮೃತಪಟ್ಟಿದ್ದು, ನ್ಯಾಯಕ್ಕಾಗಿ ತಾನಿಯಾ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರಿಂದ ಕೌಂಟರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

