Breaking News

ವಿಜಯಪುರ: ಪೆಟ್ರೋಲ್‌ ಬಂಕ್‌ ಮಾಲೀಕನಿಂದ ಗುಂಡಿನ ದಾಳಿ

ವಿಜಯಪುರ: ಕೊಲ್ಹಾರ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ಪೆಟ್ರೋಲ್ ಬಂಕ್ ಮಾಲೀಕ ಸಂಗಪ್ಪ ಪೂಜಾರಿ (48) ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಸುಖದೇವ್ ಚಲವಾದಿ (30) ಹಾಗೂ ರಾಜು ಚಲವಾದಿ (40) ಬಂಕ್‌ಗೆ ತೆರಳಿದ್ದ ವೇಳೆ ಜಗಳ ನಡೆದಿದೆ ಎನ್ನಲಾಗಿದೆ. ಜಗಳದ ವೇಳೆ ಸಂಗಪ್ಪ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದು, ಸುಖದೇವ್ ಅವರ ಹೊಟ್ಟೆ ಹಾಗೂ ಬೆನ್ನಿಗೆ ಎರಡು ಗುಂಡುಗಳು ತಗುಲಿವೆ. ಗಾಯಗೊಂಡ ಅವರನ್ನು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಸಂಗಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Share News

About BigTv News

Check Also

ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದ ಶಿಕ್ಷಕ ಎಸ್‌ಪಿ ಕಚೇರಿಯಲ್ಲಿ ಆತ್ಮಹತ್ಯೆ

ರಾಮನಗರ: ಪೋಕ್ಸೊ ಪ್ರಕರಣದ ಆರೋಪ ಎದುರಿಸುತ್ತಿದ್ದ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಶಶಿಧರ್ (49) ಅವರು ಭಾನುವಾರ ಬೆಳಗ್ಗೆ ಜಿಲ್ಲಾ ಎಸ್‌ಪಿ …

Leave a Reply

Your email address will not be published. Required fields are marked *