Breaking News

ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರೋಬ್ಬರಿ 28 ಕೋಟಿ ರೂ. ಹೈಡ್ರೋ ಗಾಂಜಾ ಹಾಗೂ 1.75 ಕೋಟಿ ರೂ ಚಿನ್ನ ಜಪ್ತಿ

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ₹28 ಕೋಟಿ ಮೌಲ್ಯದ 80.11 ಕೆಜಿ ಹೈಡ್ರೋಪೋನಿಕ್ ಗಾಂಜಾ ಜಪ್ತಿ ಮಾಡಿದ್ದಾರೆ. ಬ್ಯಾಂಕಾಕ್ ಹಾಗೂ ವಿಯೆಟ್ನಾಂನಿಂದ ಬಂದ ಪ್ರಯಾಣಿಕರ ಲಗೇಜ್ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನಾಲ್ಕು ಪ್ರಕರಣಗಳಲ್ಲಿ ಐವರನ್ನು ಬಂಧಿಸಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಇದೇ ವೇಳೆ ಅಬುದಾಬಿ ಹಾಗೂ ಕೌಲಾಲಂಪುರದಿಂದ ಬಂದ ಪ್ರಯಾಣಿಕರಿಂದ ₹1.75 ಕೋಟಿ ಮೌಲ್ಯದ 1.2 ಕೆಜಿ ಅಕ್ರಮ ಚಿನ್ನಾಭರಣವನ್ನೂ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Share News

About BigTv News

Check Also

ಪಿಎಸ್‌ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ

ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್‌ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ …

Leave a Reply

Your email address will not be published. Required fields are marked *