Breaking News

ಬ್ರಹ್ಮಾವರ: ಮನೆಗೆ ನುಗ್ಗಿ ಸೊತ್ತು ಕಳವು

ಬ್ರಹ್ಮಾವರ: ಹನೇಹಳ್ಳಿ ಗ್ರಾಮದ ಚಾಂಪಾಡಿಯಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ₹30 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. ಆ.29ರಿಂದ ಸೆ.27ರ ನಡುವಿನ ಅವಧಿಯಲ್ಲಿ ಅಣ್ಣಪ್ಪ ಪೂಜಾರಿ ಅವರ ಮೂಲ ಮನೆಯ ಬಾಗಿಲಿನ ಚಿಲಕ ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಮನೆಯಲ್ಲಿದ್ದ ತಾಮ್ರದ ಹಂಡೆ, ಕೊಡಪಾನ, ಗ್ಯಾಸ್ ಲೈಟರ್, ನಾಲ್ಕು ಹಿತ್ತಾಳೆ ಕಾಲುದೀಪ, ಜಾಗಂಟೆ, ಆರತಿ ತಟ್ಟೆ, ಪೂಜಾ ಗಂಟೆ ಹಾಗೂ ಮೂರು ಕಾಣಿಕೆ ಡಬ್ಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ₹30 ಸಾವಿರ ಎಂದು ಅಂದಾಜಿಸಲಾಗಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಅಡುಗೆ ರುಚಿಯಾಗಿಲ್ಲವೆಂದು ಕಿರಿಕ್, ಪೇಂಟರ್ ಕೈಯಿಂದಲೇ ಕಾರ್ಪೆಂಟರ್ ಭೀಕರ ಕೊಲೆ!

ಬೆಂಗಳೂರು: ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಚೇನಹಳ್ಳಿಯಲ್ಲಿ ಅಡುಗೆ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕಾರ್ಪೆಂಟರ್‌ವೊಬ್ಬರನ್ನು ಪೇಂಟರ್ …

Leave a Reply

Your email address will not be published. Required fields are marked *