Breaking News

ಲೋಕಾ ಬಲೆಗೆ ಪಿಐ, ನನಗೆ ಜೀವಭಯ

ಗುರುಮಠಕಲ್​: ಪಟ್ಟಣದ ಪೊಲೀಸ್​ ಠಾಣೆ ಪಿಐಯನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ ಹಿನ್ನೆಲೆಯಲ್ಲಿ ನನಗೆ ಜೀವಬೆದರಿಕೆ ಕರೆ ಬರುತ್ತಿದ್ದು, ರಕ್ಷಣೆ ನೀಡಬೇಕು ಎಂದು ದೂರುದಾರ ಆನಂದ ಭಜಂತ್ರಿ ಮನವಿ ಮಾಡಿದ್ದಾರೆ. ನಮ್ಮ ಹಿರಿಯರ ಆಸ್ತಿ ವಿವಾದ 1983ರಿಂದ ನಡೆಯುತ್ತಿದ್ದು, ಪೊಲೀಸ್​ ಠಾಣೆಯಿಂದ ನೊಂದಿದ್ದೇನೆ. ಇತ್ತೀಚೆಗೆ ಅಟ್ರಾಸಿಟಿ ಕೇಸ್​ನಲ್ಲಿ ಪಿಐ ದಿಕ್ಕುತಪ್ಪಿಸಲು ನೋಡಿ ನೊಂದವರಿಂದಲೇ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದರು. ನಮ್ಮಂತಹ ಬಡ ಪರಿಶಿಷ್ಟ ಜಾತಿಯವರಿಗೆ ಪಿಐ ಬಹಳಷ್ಟು ತೊಂದರೆ ಕೊಡುತ್ತಿದ್ದರು. ಜಾತಿ ಕೇಳಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರು. ಇದನ್ನು ಸಹಿಸದ ನಾನು ಪಿಐಗೆ ಸರಿಯಾದ ಪಾಠ ಕಲಿಸಲು ಲೋಕಾಯುಕ್ತರಿಗೆ ದೂರಿ ನೀಡಿದ್ದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲೋಕಾ ಬಲೆಗೆ ಬಿದ್ದಿರುವ ಪಿಐ ಕಬ್ಬಲಿಗರಾಗಿದ್ದು, ಅವರ ಸಮಾಜದವರಿಂದ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಪ್ರಾಣಭಯವಿದ್ದು, ಪೊಲೀಸ್​ ಇಲಾಖೆ ರಕ್ಷಣೆ ನೀಡಬೇಕು ಕೋರಿದರು. ಪಿಐ ಅವರನ್ನು ಲೋಕಾಯುಕ್ತ ಬಲೆಗೆ ಬೀಳುಸುವಲ್ಲಿ ರಾಜಕೀಯ ಪಿತೂರಿ ಅಥವಾ ಯಾವುದೇ ಸಂಟನೆಗಳ ಪಾತ್ರವಿಲ್ಲ. ನಾನು ನೊಂದಿರುವ ಕಾರಣ ಭ್ರಷ್ಟ ಅಧಿಕಾರಿಗೆ ಶಿೆಯಾಗಬೇಕು. ಮತ್ತೊಬ್ಬರಿಗೆ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಸಮಾಜ ಸೇವೆ ಕೆಲಸ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *