Breaking News

ಕಲಬುರಗಿ| ನಕಲಿ ಅಂಕಪಟ್ಟಿ: 52 ಗ್ರೂಪ್ ‘ಡಿ’ ಸಿಬ್ಬಂದಿ ಅಮಾನತು

ಆರೋಗ್ಯ ಇಲಾಖೆಯಲ್ಲಿ 2015ರಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಗೊಂಡಿದ್ದ ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ 52 ಸಿಬ್ಬಂದಿಯ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ನಕಲಿ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಶಿಸ್ತು ಪ್ರಾಧಿಕಾರದ ನಿರ್ದೇಶಕಿ ರಜನಿ ಎಂ. ಅವರು ಸೆ.22ರಂದು ಎಲ್ಲರನ್ನೂ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವರದಿಯಲ್ಲಿ, ಸಿಬ್ಬಂದಿ ಸಲ್ಲಿಸಿದ್ದ ಅಂಕಪಟ್ಟಿಯಲ್ಲಿನ ಅಂಕಗಳು ನೈಜ ಅಂಕಪಟ್ಟಿಯ ಅಂಕಗಳಿಗಿಂತ ಭಾರಿ ವ್ಯತ್ಯಾಸ ಹೊಂದಿರುವುದು ಪತ್ತೆಯಾಗಿದೆ. ಅಮಾನತು ಅವಧಿಯಲ್ಲಿ ಸಿಬ್ಬಂದಿಗೆ ಜೀವನಾಧಾರ ಭತ್ಯೆ ನೀಡಲಾಗುತ್ತದೆ. ಅಮಾನತುಗೊಂಡ 52 ಸಿಬ್ಬಂದಿಯನ್ನು ವಿಜಯಪುರ, ಯಾದಗಿರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳ ವಿವಿಧ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಿ ಆದೇಶಿಸಲಾಗಿದೆ. ಆದರೆ, ಅಮಾನತು ಆದೇಶ ಹೊರಬಂದ ದಿನವೇ ಸ್ಥಳ ನಿಯುಕ್ತಿ ಮಾಡಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮಲತಂದೆಯ ಕ್ರೌರ್ಯ; 18 ವರ್ಷದ ಮಗನ ಕೊಲೆ, ಮೂರು ದಿನಗಳ ಬಳಿಕ ಬಯಲಾಯ್ತು ಕೃತ್ಯ!

ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 18 ವರ್ಷದ ಯುವಕನನ್ನು ಹತ್ಯೆಗೈದು, ಆತನ ತಾಯಿಯ ಮೇಲೂ ಹಲ್ಲೆ ನಡೆಸಿರುವ ಘಟನೆ …

Leave a Reply

Your email address will not be published. Required fields are marked *