ಗುಜರಾತ್ : ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾವಣ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದೇಶದ ಪ್ರಧಾನಿಯನ್ನು ನಿಂದಿಸಲು ಕಾಂಗ್ರೆಸಿಗರು ಸ್ಪರ್ಧೆಗೆ ಬಿದ್ದಿದ್ದಾರೆ. ಸತತ ಸೋಲಿನಿಂದ ಅವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ನನ್ನನ್ನು ರಾವಣನಿಗೆ ಹೋಲಿಸಲು ಖರ್ಗೆ ಅವರಿಗೆ ಹೇಳಿಕೊಡಲಾಗಿದೆ ಎಂದು ಟೀಕಿಸಿದರು.
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಕಲೋಲ್ ಪ್ರದೇಶದ ವೆಜಲ್ಪುರ್ ಎಂಬಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಕೆಲವು ದಿನಗಳ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಮೋದಿ ಅವರಿಗೆ ನಾಯಿ ಸಾವು ಬರಲಿದೆ, ಮತ್ತೊಬ್ಬರು ಹಿಟ್ಲರ್ ಸಾವು ಬರಲಿದೆ ಎಂದಿದ್ದರು. ಇದೇ ರೀತಿ, ಮತ್ತೊಬ್ಬರು ಮೋದಿಯನ್ನು ಕೊಲ್ಲುತ್ತೇನೆ ಎಂದಿದ್ದರು. ಇನ್ನೊಬ್ಬರು ದೆವ್ವ ಅಂತ ಹೇಳಿದ್ದರು. ಕಾಂಗ್ರೆಸ್ ಕೇವಲ ಮೋದಿ ಹೆಸರು ಜಪ ಮಾಡುತ್ತಿರುವುದಕ್ಕೆ ನನಗೆ ಆಶ್ಚರ್ಯವೇನೂ ಇಲ್ಲ. ಆದರೆ, ಯಾರಾದರೂ ಈ ರೀತಿ ಮಾತನಾಡುತ್ತಾರೆಯೇ? ಮೋದಿಯನ್ನು ಅವಮಾನಿಸುವುದು ಕಾಂಗ್ರೆಸಿಗರು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿಕೊಂಡಿದ್ದಾರೆ,’ ಎಂದು ಪ್ರಧಾನಿ ಮೋದಿ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

