Breaking News

ಓವರ್‌ ಟೇಕ್‌ ವೇಳೆ ಕನ್ನಡಿಗೆ ಹಾನಿ: ಬಸ್‌ ಚಾಲಕನಿಗೆ ಹಲ್ಲೆ

ಬೆಂಗಳೂರು: ಓವರ್‌ಟೇಕ್ ಮಾಡುವ ವೇಳೆ ವಿಆರ್‌ಎಲ್‌ ಬಸ್‌ನ ಮೀರರ್‌ ಮುರಿದಿದ್ದಕ್ಕೆ ಕೋಪಗೊಂಡ ಚಾಲಕ ಹಾಗೂ ಕಚೇರಿ ಸಿಬ್ಬಂದಿ ಸೀಬರ್ಡ್‌ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಸೀಬರ್ಡ್‌ ಬಸ್ ಚಾಲಕ ದಿವಾಕರ್‌ ಗೋವರ್ಧನ್‌ ಥಿಯೇಟರ್ ಬಳಿ ಓವರ್‌ಟೇಕ್‌ ಮಾಡುವಾಗ ವಿಆರ್‌ಎಲ್‌ ಬಸ್‌ನ ಮೀರರ್‌ ಮುರಿದಿದ್ದರು. ಇದರಿಂದ ಕೋಪಗೊಂಡ ವಿಆರ್‌ಎಲ್‌ ಚಾಲಕ, ಸಿಬ್ಬಂದಿಗೆ ಮಾಹಿತಿ ನೀಡಿ ಬಸ್‌ ಅಡ್ಡಗಟ್ಟಿಸಿ, ದಿವಾಕರ್‌ಗೆ ಮನಸೋಇಚ್ಛೆ ಥಳಿಸಿ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಗಾಯಗೊಂಡ ದಿವಾಕರ್‌ ಆಸ್ಪತ್ರೆಗೆ ಚಿಕಿತ್ಸೆ ಪಡೆದು ದೂರು ನೀಡಿದ್ದು, ಆರ್‌ಎಂಸಿ ಯಾರ್ಡ್‌ ಠಾಣೆಯಲ್ಲಿ ವಿಆರ್‌ಎಲ್‌ ಚಾಲಕ ಶಂಕರ್‌ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಬಸ್‌ ಸಮೇತ ಪರಾರಿಯಾಗಿದ್ದು, ಬೆಂಗಳೂರಿಗೆ ಮರಳಿದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *