Breaking News

ಕುಡಿದು ಗಲಾಟೆ, ಪೊಲೀಸ್ ಮೇಲೆ ಹಲ್ಲೆ ಆರೋಪ: ಐಎಎಸ್ ಅಧಿಕಾರಿ ವಿರುದ್ಧ ಕೇಸ್ ದಾಖಲು

ಬೆಂಗಳೂರು: ಕುಡಿದು ಗಲಾಟೆ ಮಾಡಿದ ಆರೋಪದಡಿ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಸೇರಿದಂತೆ ಐವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಕಾಸ್ ಅವರ ಸ್ನೇಹಿತರಾದ ನಿತೇಶ್, ಅಭಯ್, ಉದಯ್ ಸಿಂಗ್ ಹಾಗೂ ರೋಷನ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ರಾತ್ರಿ 1.30ರ ಸುಮಾರಿಗೆ ಪಬ್ ಪರಿಶೀಲನೆಗೆ ತೆರಳಿದ್ದ ಸಿಸಿಬಿ ಪೊಲೀಸರ ಬಳಿ ಗುರುತಿನ ಚೀಟಿ ಕೇಳಿದಾಗ ವಿಕಾಸ್ ಮರ್ಮಠ್ ಆಕ್ಷೇಪ ವ್ಯಕ್ತಪಡಿಸಿ, ಕರ್ತವ್ಯದಲ್ಲಿದ್ದ ಇನ್ಸ್‌ಪೆಕ್ಟರ್‌ಗೆ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಿಕಾಸ್ ಮರ್ಮಠ್ ಅವರು ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

Share News

About BigTv News

Check Also

ಕುಂದಾಪುರ : ಪತಿಯ ಕಿರುಕುಳಕ್ಕೆ ಮನನೊಂದ ಗೃಹಿಣಿ ಫಿನಾಯಿಲ್‌ ಸೇವನೆ, ದೂರು ದಾಖಲು

ಉಡುಪಿ: ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲೂರಿನ …

Leave a Reply

Your email address will not be published. Required fields are marked *