ಧಾರವಾಡ : ದೇಶದಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳು ಅಶಾಂತಿ ಸೃಷ್ಟಿಸುವುದರ ಜೊತೆಗೆ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿವೆ .
ಈ ಸಂಘಟನೆಗಳನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ , ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು
ಈ ಎರಡೂ ಸಂಘಟನೆಯವರು ಭಾರತವನ್ನು 2047 ಕ್ಕೆ ಇಸ್ಲಾಮೀಕರಣಗೋಳಿಸುವ ಉದ್ದೇಶ ಹೊಂದಿದ್ದಾರೆ . ಕೇರಳ ರಾಜ್ಯದ ಮುಖ್ಯಮಂತ್ರಿ ಪೀಣರಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಅಚ್ಯುತನ್ ಇಬ್ಬರೂ ಪಿಎಫ್‌ಐ ಹಾಗೂ ಎಸ್ ಡಿಪಿಐ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ .
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಈ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಒತ್ತಾಯ ಮಾಡಿತ್ತು . ಈಗ ಇದೇ ಪಕ್ಷ ಅಧಿಕಾರದಲ್ಲಿದ್ದು , ಈ ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು .
ದೇಶ ಹಾಗೂ ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕೋಲೆಯಲ್ಲಿ ಬಹುತೇಕ PFI – SDPI ಸಂಘಟನೆಗಳ ಕೈವಾಡವೇ ಇದೆ ಆದ್ದರಿಂದ ಈ ಸಂಘಟನೆಗಳನ್ನು ಬ್ಯಾನ್ ಮಾಡದೇ ಹೋದಲ್ಲಿ ಆ ಸಂಘಟನೆಗಳ ಕಾರ್ಯಕರ್ತರನ್ನು ನಾವೇ ನುಗ್ಗಿ ಹೊಡೆಯಬೇಕಾಗುತ್ತದೆ
ಎಂದು ಗಂಗಾಧರ ಕುಲಕರ್ಣಿ ಎಚ್ಚರಿಸಿದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





