ಉಡುಪಿ: ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲೂರಿನ ಜಯಶ್ರೀ ಅಸ್ವಸ್ಥಗೊಂಡ ಮಹಿಳೆ. 2024ರ ನವೆಂಬರ್‌ನಲ್ಲಿ ಅಮಾಸೆಬೈಲಿನ ಪ್ರಕಾಶ್ ಆಚಾರ್ಯ ಅವರನ್ನು ವಿವಾಹವಾಗಿದ್ದರು. ಮದುವೆಯ ಬಳಿಕ ಪತಿಯ ಅಣ್ಣ ಪ್ರಭಾಕರ ಹಾಗೂ ತಂಗಿ ಪ್ರಶಾಂತಿ ಕಿರುಕುಳ ನೀಡುತ್ತಿದ್ದರು ಎಂದು ಜಯಶ್ರೀ ಆರೋಪಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಆರು ತಿಂಗಳಿಂದ ಮನೆಗೆ ಬಾರದೆ ದೂರ ಉಳಿದಿದ್ದ ಎನ್ನಲಾಗಿದೆ. ಇತ್ತೀಚೆಗೆ ನಡೆದ ಕುಟುಂಬದ ಮಾತುಕತೆಯಲ್ಲೂ ಪತಿ ಸಂಸಾರ ನಡೆಸಲು ನಿರಾಕರಿಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ಮನನೊಂದ ಜಯಶ್ರೀ ಫಿನಾಯಿಲ್ ಸೇವಿಸಿದ್ದು, ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
