ಪತಿ-ಪತ್ನಿ ಮಧ್ಯೆ ನಿತ್ಯ ಜಗಳವಾಗುತ್ತಿದ್ದು, ಇದರಿಂದ ಕೋಪಗೊಂಡಿದ್ದ ಪತಿ, ಪತ್ನಿಗೆ ಕಬ್ಬಿಣದ ಪೈಪಿನಿಂದ ಹೊಡೆದು ಕೊಲೆ ಮಾಡಿದ್ದಾನೆ.ರಕ್ತಸ್ರಾವದಿಂದ ಬಳಲುತ್ತಿದ್ದ ಮಂಜುಳಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಕಾಫಿತೋಟವೊಂದರ ಲೈನ್ ಮನೆಯಲ್ಲಿ ಮಂಜುಳಾ ವಾಸವಿದ್ದರು. ದಂಪತಿ ನಿತ್ಯ ಜಗಳ ಆಡುವುದನ್ನು ನೋಡಿದ್ದ ತೋಟದ ರೈಟರ್ ಕೆಲಸಕ್ಕೆ ಬರಬೇಡಿ ಎಂದಿದ್ದರು. ಇದರಿಂದಾಗಿ ನೊಂದಿದ್ದ ಪತಿ ಮಗುವಿನ ಎದುರೇ ತಾಯಿಯನ್ನು ಕೊಂದಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

