Breaking News

ಬೆಂಗಳೂರು ಪಬ್​ನಲ್ಲಿ ಐಡಿ ಕಾರ್ಡ್​ ಕೇಳಿದ್ದಕ್ಕೆ ಇನ್​ಸ್ಪೆಕ್ಟರ್ ಕಪಾಳಕ್ಕೆ ಹೊಡೆದ ಐಎಎಸ್​ ಅಧಿಕಾರಿ: FIR ದಾಖಲು

ಬೆಂಗಳೂರು: ನಗರದ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯ ಪಬ್‌ನಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಗಲಾಟೆ ಮಾಡಿದ ಆರೋಪದಡಿ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಕಾಸ್ ಮರ್ಮಠ್ ಅವರು ಸ್ನೇಹಿತರಾದ ನಿತೇಶ್, ಅಭಯ್, ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಪಬ್‌ಗೆ ಬಂದಿದ್ದರು ಎನ್ನಲಾಗಿದೆ. ರಾತ್ರಿ 1.30ರ ಸುಮಾರಿಗೆ ಪರಿಶೀಲನೆಗೆ ತೆರಳಿದ್ದ ಸಿಸಿಬಿ ಅಧಿಕಾರಿಗಳು ಗುರುತಿನ ಚೀಟಿ ಕೇಳಿದಾಗ, ಕೋಪಗೊಂಡ ಅಧಿಕಾರಿ ಅಸಭ್ಯವಾಗಿ ವರ್ತಿಸಿ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಕುಂದಾಪುರ : ಪತಿಯ ಕಿರುಕುಳಕ್ಕೆ ಮನನೊಂದ ಗೃಹಿಣಿ ಫಿನಾಯಿಲ್‌ ಸೇವನೆ, ದೂರು ದಾಖಲು

ಉಡುಪಿ: ಪತಿಯ ಕಿರುಕುಳದಿಂದ ಮನನೊಂದ ಗೃಹಿಣಿಯೊಬ್ಬರು ಫಿನಾಯಿಲ್ ಸೇವಿಸಿ ಅಸ್ವಸ್ಥಗೊಂಡ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಲೂರಿನ …

Leave a Reply

Your email address will not be published. Required fields are marked *