Breaking News

ಬೆಂಗಳೂರು: ಡ್ರೈವರ್​​​ ಮೇಲೆ ಗುಂಡಿನ ದಾಳಿ ಮಾಡಿದ ರಿಯಲ್ ಎಸ್ಟೇಟ್ ಉದ್ಯಮಿ!

ಬೆಂಗಳೂರು: ಪಿಳ್ಳಗಾನಹಳ್ಳಿ ನೈಸ್ ರಸ್ತೆ ಸೇತುವೆ ಬಳಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ, ಶ್ರೀನಿವಾಸ್ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಶ್ರೀನಿವಾಸ್ ಹಿಂದೆ ಸಂಪಂಗಿ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಒಂದು ವರ್ಷದ ಹಿಂದೆ ಶ್ರೀನಿವಾಸ್‌ನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇತ್ತೀಚೆಗೆ ಶ್ರೀನಿವಾಸ್ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಸಂಪಂಗಿ ದೂರು ನೀಡಿದ್ದ. ನಿನ್ನೆ ಸಂಜೆ ಕಾರಿನಲ್ಲಿ ಬಂದ ಸಂಪಂಗಿ ಹಾಗೂ ಆತನ ಸಹಚರರು ಬೈಕ್‌ನಲ್ಲಿ ಬರುತ್ತಿದ್ದ ಶ್ರೀನಿವಾಸ್‌ನನ್ನು ಅಡ್ಡಗಟ್ಟಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಹಿರಿಯೂರು: ಲವ್‌ ಜಿಹಾದ್‌ಗೆ ಮಹಿಳೆ ಬಲಿ; ಐವರ ವಿರುದ್ಧ ಪ್ರಕರಣ ದಾಖಲು

ಚಿತ್ರದುರ್ಗ: ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಆಶಾ (24), ಇಮ್ರಾನ್ (40) ಎಂಬ ವಾಹನ ಚಾಲಕನನ್ನು ಪ್ರೀತಿಸಿ 2023ರಲ್ಲಿ ವಿವಾಹವಾಗಿದ್ದರು. …

Leave a Reply

Your email address will not be published. Required fields are marked *