Breaking News

ಬೆಳಗಿನ ಜಾವ ಸೈಕಲ್‌ಗೆ ಡಿಕ್ಕಿ : ಪತ್ರಿಕಾ ವಿತರಕ ಸಾವು


ಸಾಗರ: ನಗರದ ಪ್ರವಾಸಿ ಮಂದಿರದ ಎದುರು ಶನಿವಾರ ಬೆಳಗಿನ ಜಾವ ಸೈಕಲ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪತ್ರಿಕಾ ವಿತರಕ, ‌‌ಬೆಳಲಮಕ್ಕಿ ಬಡಾವಣೆಯ ನಿವಾಸಿ ಗಣೇಶ್ (ಚೌಡ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

19 ವರ್ಷದ ಗಣೇಶ್ ಅವರು ಪತ್ರಿಕೆ ವಿತರಿಸಲು ತಮ್ಮ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಯಲ್ಲಾಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಶನಿವಾರ ಅಂತ್ಯಕ್ರಿಯೆ ನಡೆಯಿತು. ಗಣೇಶ್ ಅವರು ಬೆಳಲಮಕ್ಕಿಯ ಸುರೇಶ್, ಉಮಾ ದಂಪತಿ ಏಕೈಕ ಪುತ್ರ. ಸುರೇಶ್ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಉಮಾ ಅವರು ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡುತ್ತಾರೆ. ಗಣೇಶ್ ಪತ್ರಿಕೆ ಹಂಚುವ ಮೂಲಕ ಬರುತ್ತಿದ್ದ ಆದಾಯದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿತ್ತು. ಗಣೇಶ್ ಅಕಾಲಿಕ ನಿಧನದಿಂದ ಅವರ ಕುಟುಂಬ ಕಂಗಾಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *