Breaking News

ಗಂಗಾವತಿ: 10 ಬೈಕ್ ಕಳ್ಳತನ ಮಾಡಿದ ಆರೋಪಿ ಬಂಧನ

ಗಂಗಾವತಿ: ಕಳೆದ ಒಂದು ವರ್ಷದಲ್ಲಿ 10 ದ್ವಿಚಕ್ರ ವಾಹನ ಕಳ್ಳತನ ( ₹4.50ಲಕ್ಷ ಮೌಲ್ಯ) ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಗಂಗಾವತಿ ನಗರದ ಸಾಯಿನಗರದ ನಿವಾಸಿ ಪ್ರಕಾಶ ಈರಣ್ಣ ತಳವಾರ (41) ಬೈಕ್ ಕಳ್ಳತನ ಮಾಡಿದ ಆರೋಪಿ. ಏ 28 ರಂದು ಗಂಗಾವತಿ ತಾಲ್ಲೂಕಿನ ಬಸಾ ಪಟ್ಟಣ ಗ್ರಾಮದ ಮಲ್ಲಪ್ಪ ಬಸಪ್ಪ ಎಂಬ ವ್ಯಕ್ತಿ ತಮ್ಮ ಮನೆ ಕಳ್ಳತನ ಆಗಿರುವ ಬಗ್ಗೆ ಠಾಣೆಗೆ ದೂರು ನೀಡಿದ್ದರು. ಈ ನಿಟ್ಟಿನಲ್ಲಿ ಪೋಲಿಸರ ತಂಡ ಬೈಕ್ ಕಳ್ಳತನದ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆಗ ಆರೋಪಿ 10 ಬೈಕ್ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿದ್ದಾನೆ. ಎಸ್‌ಪಿ, ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ನಗರ ಠಾಣೆ ಪಿಐ ಪ್ರಕಾಶ ಮಾಳೆ ನೇತೃತ್ವದಲ್ಲಿ ಆರೋಪಿ ಪತ್ತೆ ಕಾರ್ಯಾಚರಣೆ ನಡೆದಿದೆ. ಸಿ.ಎಚ್.ಸಿ ಮರಿಶಾಂತಗೌಡ, ಫಕಿರಪ್ಪ, ಎಚ್.ಸಿ ಭೀಮಪ್ಪ, ಸಿಪಿಸಿ ಮೈಲಾರಪ್ಪ, ಸಿಪಿಸಿ ಗುಂಡಪ್ಪ, ಎಚ್.ಸಿ ರಾಘವೇಂದ್ರ, ಎಚ್.ಸಿ ಸುಭಾಷ, ಸಿಪಿಸಿ ವಿಶ್ವನಾಥ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *