Breaking News

ಮಾರ್ವೆಲ್ ಪ್ರಾಪರ್ಟೀಸಗೆ ಮುಡಿಗೆ ISO

ಹುಬ್ಬಳ್ಳಿ: ವಿಶ್ವ ವರ್ಗದಲ್ಲಿ ಖ್ಯಾತಿ ಪಡೆದ ಮಾರ್ವೆಲ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಐಎಸ್ಒ ಪ್ರಮಾಣಿಕರಣಗೊಂಡಿದ್ದು, ರಿಯಲ್ ಎಸ್ಟೇಟ್ ಅಭಿವೃದ್ಧಿ ಯೋಜನೆಗಳಿಗೆ ಹು-ಧಾ ಮಹಾನಗರದಲ್ಲಿ ಪ್ರಸಿದ್ದಿ ಪಡೆದಿರುವ ಮಾರ್ವೆಲ್ ಪ್ರಾಪರ್ಟೀಸ್ ಐಎಸ್‌ಒ ಗರಿಯನ್ನು ಮುಡಿಗೇರಿಸಿಕೊಂಡಿರುವುದು ಖುಷಿಯ ಸಂಗತಿಯಾಗಿದೆ ಎಂದು ವ್ಯವಸ್ಥಾಪಕ ಮುಖ್ಯಸ್ಥರಾದ ಸ್ಟೀನಲ್ ಡಿಸೋಜಾ ತಿಳಿಸಿದರು.ನಗರದಲ್ಲಿಂದು ಖಾಸಗಿ ಹೋಟೆಲನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವವರ್ಗದ ರೀಯಲ್ ಎಸ್ಟೇಟ್ ವ್ಯವಹಾರದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಹು-ಧಾ ಮಹಾನಗರದಲ್ಲಿ ರೀಯಲ್ ಎಸ್ಟೇಟ್ ಯೋಜನೆಯಲ್ಲಿ ಮಾರ್ವೆಲ್ ಪ್ರಾಪರ್ಟೀಸ್ ಒಂದು ಹಜ್ಜೆ ಮುಂದಿಡುವ ಮೂಲಕ ಉತ್ತಮ ಸಾಧನೆ ಮಾಡಿದೆ ಎಂದರು. ಐಎಸ್‌ಒ ಯಿಂದ 9001:2015, 14001:2015, 45001:2018 ಪ್ರಮಾಣಿಕರಣ ಮಾಡುವ ಮೂಲಕ ಗುಣಮಟ್ಟದ ನೋಂದಣಿ, ಗುಣಮಟ್ಟದ ವ್ಯವಸ್ಥೆ, ಸಂಸ್ಥೆಯಿಂದ ಮೌಲ್ಯಮಾಪನ ಹಾಗೂ ಪರಿಶೋಧನ ನಂತರದಲ್ಲಿ ಪ್ರಮಾಣಿಕರಣ ಮಾಡಿ ಐಎಸ್‌ಒ ಗರಿಯನ್ನು ನೀಡಿರುವುದು ನಿಜವಾಗಿಯೂ ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಹೇಳಿದರು. ಐಎಸ್‌ಒ 9001:2015 ಮಾರ್ವೆಲ್ ಪ್ರಾಪರ್ಟೀಸ್ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಿರುವ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಿ ISO 9001:2015 ಪ್ರಮಾಣ ಪತ್ರ ನೀಡಿದೆ ಎಂದರು.ಐಎಸ್‌ಒ 14001:2015 ಮಾರ್ವೆಲ್ ಪ್ರಾಪರ್ಟೀಸ್ ಪರಿಸರ ನಿರ್ವಹಣೆಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿರುವಕ್ಕೆ ಸಂದ ಗರಿಯಾಗಿದೆ ಎಂದು ಅವರು ಹೇಳಿದರು.ಐಎಸ್‌ಒ ಗರಿ ಒದಗಿ ಬರಬೇಕಾದರೇ ಅದಕ್ಕೆ ಸಂಸ್ಥೆಯಲ್ಲಿ ವ್ಯವಸ್ಥಿತ ಕಾರ್ಯಚಟುವಟಿಕೆ, ಉತ್ತಮ ಗುಣಮಟ್ಟ ನಿರ್ವಹಣೆ, ಬಿಕ್ಕಟ್ಟು ನಿರ್ವಹಣಾ ಕೌಶಲ್ಯ ಹಾಗೂ ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸುವ ಮೂಲಕ ಅಭಿವೃದ್ಧಿ ಪಡಿಸುವುದು ಅವಶ್ಯಕ ಈ ಹಿನ್ನೆಲೆಯಲ್ಲಿ ಮಾರ್ವೆಲ್ ಪ್ರಾಪರ್ಟೀಸ್ ಇಂತಹ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಐಎಸ್‌ಒ ಮುಖ್ಯಸ್ಥರು ಅದಿತ್ಯ ಅರನಕರ ಅವರಿಗೆ ಐಎಸ್‌ಒ ಪ್ರಮಾಣ ಪತ್ರ ವಿತರಿಸಿ ಅಭಿನಂದನೆ ಸಲ್ಲಿಸಿದರು.ಈ ಸಮಯದಲ್ಲಿ ಅನೀಲ ಬಾಳಕ್ಕನವರ, ವಿರೇಶ ಕುಲಕರ್ಣಿ, ಗುರುರಾಜ ಅಣ್ಣಿಗೇರಿ, ಸುಧೀರ ಸ್ವರೂಪ, ಪ್ರದೀಪ ಸೇರಿದಂತೆ ಇತರರು ಇದ್ದರು…

Share News

About admin

Check Also

ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್..?

ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…? 3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ …

Leave a Reply

Your email address will not be published. Required fields are marked *