Breaking News

ಸತ್ತ ಜಾನುವಾರುಗಳ ಪರಿಹಾರದ ಹಣ ನುಂಗಿದ ಪಾಪಿಗಳು : ರಾಬಕೋವಿ ಹಾಲು ಒಕ್ಕೂಟದ ಮತ್ತಷ್ಟು ಅಕ್ರಮ ಬಯಲು!

ಬಳ್ಳಾರಿ: ರಾಬಕೋವಿ ಹಾಲು ಒಕ್ಕೂಟದಲ್ಲಿ ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರದ ಹಣ ದುರುಪಯೋಗಪಡಿಸಿಕೊಂಡು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಒಕ್ಕೂಟದ ಅಕೌಂಟೆಂಟ್ ಉಮಾಮಹೇಶ್ವರಿ ಹಾಗೂ ನಿವೃತ್ತ ಮ್ಯಾನೇಜರ್ ವೆಂಕಟೇಶ್ ನಡುವಿನ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದ್ದು, ರೈತರಿಗೆ ಸಲ್ಲಬೇಕಾದ ವಿಮಾ ಹಣವನ್ನು ಅಕ್ರಮವಾಗಿ ವರ್ಗಾಯಿಸಿರುವ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಧನಂಜಯ್ ಹಾಮಲ್ ಅವರು ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆ ಹಾಗೂ ಕೆಎಂಎಫ್ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ರೋಡ್ ರೇಜ್ ಅಟ್ಟಹಾಸ – ಹಾರ್ನ್ ಮಾಡಿದ್ದಕ್ಕೆ ಕಾರು ಚೇಸ್ ಮಾಡಿ ಆಟೋ ಚಾಲಕನ ಭೀಕರ ದರ್ಪ!

ಬೆಂಗಳೂರು: ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಹಾರ್ನ್ ಮಾಡಿದ ಕಾರಣಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಕಾರನ್ನು ಬೆನ್ನಟ್ಟಿ ಅಡ್ಡಗಟ್ಟಿದ ಘಟನೆ ನಡೆದಿದೆ. …

Leave a Reply

Your email address will not be published. Required fields are marked *