Breaking News

ಬೆಂಗಳೂರಿನ ಸ್ಪಾ, ಸಲೂನ್‌ಗಳಲ್ಲಿ ನೈತಿಕ ಪೊಲೀಸ್‌ಗಿರಿ, ಬ್ಲಾಕ್‌ಮೇಲ್; ನಕಲಿ ವರದಿಗಾರರು ಸೇರಿ 6 ಮಂದಿ ಪೊಲೀಸರ ಬಲೆಗೆ!

ಬೆಂಗಳೂರು: ಸ್ಪಾ ಮತ್ತು ಸಲೂನ್‌ಗಳಿಗೆ ನುಗ್ಗಿ ನಕಲಿ ಮಾಧ್ಯಮ ಐಡಿ ಕಾರ್ಡ್ ತೋರಿಸಿ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಲಕ್ಷ್ಮಿ, ಮಮತಾ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಹಾಗೂ ಆಸೀಫ್ ಎಂದು ಗುರುತಿಸಲಾಗಿದೆ. ಸ್ಪಾ ಮಾಲೀಕರೊಬ್ಬರಿಗೆ ಬೆದರಿಕೆ ಹಾಕಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಮಾಲೀಕರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ ಕಾರು, ಬೈಕ್, ನಗದು ಹಾಗೂ ನಕಲಿ ಐಡಿ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರಿನಲ್ಲಿ ರೋಡ್ ರೇಜ್ ಅಟ್ಟಹಾಸ – ಹಾರ್ನ್ ಮಾಡಿದ್ದಕ್ಕೆ ಕಾರು ಚೇಸ್ ಮಾಡಿ ಆಟೋ ಚಾಲಕನ ಭೀಕರ ದರ್ಪ!

ಬೆಂಗಳೂರು: ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಹಾರ್ನ್ ಮಾಡಿದ ಕಾರಣಕ್ಕೆ ಕೋಪಗೊಂಡ ಆಟೋ ಚಾಲಕನೊಬ್ಬ ಕಾರನ್ನು ಬೆನ್ನಟ್ಟಿ ಅಡ್ಡಗಟ್ಟಿದ ಘಟನೆ ನಡೆದಿದೆ. …

Leave a Reply

Your email address will not be published. Required fields are marked *