ಕಲಬುರಗಿ: ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಅಕ್ಕಸಾಲಿಗ ಮಮ್ತಾಜ್‌ವುಲ್ ಮಲೀಕ್‌ನನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಸರಾಫ್ ಬಜಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಲೀಕ್, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಸಂಪರ್ಕದಲ್ಲಿದ್ದು, ಸೂಕ್ಷ್ಮ ಮಾಹಿತಿ ಹಂಚಿಕೊಂಡಿದ್ದ ಆರೋಪವಿದೆ. ಈ ಹಿಂದೆ ಬಂಧಿತನಾಗಿದ್ದ ಮೊಹಮ್ಮದ್ ಸಮೀರ್ ವಿಚಾರಣೆಯಿಂದ ದೊರೆತ ಸುಳಿವಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, ವಿಚಾರಣೆಗೆ ಒಳಪಡಿಸಿದ ಇಬ್ಬರಲ್ಲಿ ಒಬ್ಬನಿಗೆ ಮಾತ್ರ ಉಗ್ರ ಸಂಘಟನೆ ಸಂಪರ್ಕವಿರುವುದು ತಿಳಿದುಬಂದಿದೆ. ಆತನ ಡಿಜಿಟಲ್ ಸಂಪರ್ಕ ಹಾಗೂ ಚಟುವಟಿಕೆಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

