Breaking News

ಸಾಲವಾಗಿ ನೀಡಿದ್ದ ಹಣ ವಾಪಸ್ ಕೇಳಿದ್ದಕ್ಕೆ ಇರಿದು ಕೊಲೆಗೆ ಯತ್ನ: ಆರೋಪಿ ಬಂಧನ

ಬಂಟ್ವಾಳ: ಸಾಲವಾಗಿ ನೀಡಿದ್ದ ಹಣ ವಾಪಸ್ ಕೇಳಿದ ವಿಚಾರಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗಾಯಾಳುವನ್ನು ಬಿ.ಮೂಡ ಗ್ರಾಮದ ಉದಯ್ ಎಂದು ಗುರುತಿಸಲಾಗಿದೆ. ಅ.17ರಂದು ಹಣ ನೀಡುವುದಾಗಿ ಹೇಳಿ ಉದಯ್ ಅವರನ್ನು ಪಲ್ಲಮಜಲು ಜಂಕ್ಷನ್‌ಗೆ ಕರೆಸಿಕೊಂಡ ಆರೋಪಿ ಅಜಿತ್ ಕುಮಾರ್ ಶೆಟ್ಟಿ (28), ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ತಡೆಯಲು ಬಂದ ಉದಯ್ ಸಹೋದರ ಲೋಕೇಶ್ ಅವರನ್ನೂ ಬೆನ್ನಟ್ಟಿದ್ದಾನೆ ಎನ್ನಲಾಗಿದೆ. ಗಾಯಾಳು ಉದಯ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಕಲಬುರಗಿ: ಶಂಕಿತ ಲಷ್ಕರ್‌ ಉಗ್ರ ವಶ; ಚಿನ್ನದಂಗಡಿಯಲ್ಲಿ ಕೆಲಸ ಮಾಡ್ತಿದ್ದ ಮಲೀಕ್‌!

ಕಲಬುರಗಿ: ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮೂಲದ ಅಕ್ಕಸಾಲಿಗ ಮಮ್ತಾಜ್‌ವುಲ್ ಮಲೀಕ್‌ನನ್ನು …

Leave a Reply

Your email address will not be published. Required fields are marked *