Breaking News

ನವರಾತ್ರಿ ಪೂಜೆ ವೇಳೆ ಗಲಾಟೆ: ಚಾಕು ಇರಿತಕ್ಕೆ ಯುವಕ ಸಾವು

ಬಾಗಲಕೋಟೆ: ಮುಧೋಳದ ವಿನಾಯಕ ನಗರದಲ್ಲಿ ನವರಾತ್ರಿ ದುರ್ಗಾದೇವಿ ಘಟಸ್ಥಾಪನೆ ಪೂಜೆ ವೇಳೆ ಜೋರಾಗಿ ಮಾತನಾಡದಂತೆ ಬುದ್ಧಿವಾದ ಹೇಳಿದ್ದಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ಪೂಜೆಯ ವೇಳೆ ಶಾಂತವಾಗಿರುವಂತೆ ಸೂಚಿಸಿದ್ದ ನಿತಿನ್ ನಿಂಬಾಳ್ಕರ್ ಮೇಲೆ ಯುವಕರ ಗುಂಪು ಚಾಕುವಿನಿಂದ ಹಲ್ಲೆ ನಡೆಸಿದೆ. ಕತ್ತು ಹಾಗೂ ಪಕ್ಕೆಲುಬಿಗೆ ಇರಿತಕ್ಕೊಳಗಾದ ನಿತಿನ್ ಮೃತಪಟ್ಟಿದ್ದು, ರಕ್ಷಣೆಗೆ ಮುಂದಾದ ಚಿಕ್ಕಪ್ಪ ಸಂಜು ನಿಂಬಾಳ್ಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಕರಣದಲ್ಲಿ ಶ್ರೀನಿವಾಸ ಕೊರವರ ಸೇರಿದಂತೆ ಆರು ಮಂದಿ ಆರೋಪಿಗಳ ಹೆಸರು ಕೇಳಿಬಂದಿದ್ದು, ಮುಧೋಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಸೊಸೆ ಮೇಲೆ ಅತ್ಯಾಚಾರ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 3.30 ಲಕ್ಷ ರೂ. ದಂಡ

ವಿಜಯಪುರದಲ್ಲಿ ಸೊಸೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಗಣೇಶ ನಗರದ ನಿವಾಸಿ ರಮೇಶ ಮೂರಮಟ್ಟಿಗೆ ನ್ಯಾಯಾಲಯ ಕಠಿಣ ಜೀವಾವಧಿ …

Leave a Reply

Your email address will not be published. Required fields are marked *