ಧಾರವಾಡದಲ್ಲಿ ಬೆತ್ತಲೆ ಕಾಮುಕನ ಅಟ್ಟಹಾಸ..! ಲೇಡೀಸ್ ಪಿಜಿಗಳೇ ಟಾರ್ಗೆಟ್…?
3 ತಿಂಗಳಿಂದ ಯುವತಿಯರಿಗೆ ಕಿರುಕುಳ ಆರೋಪ — ಸಿಸಿಟಿವಿಯಲ್ಲಿ ಬೆತ್ತಲೆ ಓಡಾಟದ ದೃಶ್ಯ ಸೆರೆ!
ಧಾರವಾಡ: ವಿದ್ಯಾನಗರಿ ಧಾರವಾಡದಲ್ಲಿ ಯುವತಿಯರ ಸುರಕ್ಷತೆಗೇ ಸವಾಲು ಎದುರಾಗಿದೆಯಾ? ರಾತ್ರಿ ಆಗುತ್ತಿದ್ದಂತೆ ಯುವತಿಯರು ವಾಸಿಸುವ ಪಿಜಿಗಳತ್ತ ಬೆತ್ತಲೆಯಾಗಿ ನುಗ್ಗುವ ವ್ಯಕ್ತಿಯೊಬ್ಬನ ಅಸಭ್ಯ ವರ್ತನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಪ್ತಾಪುರ ಪ್ರದೇಶದ ಪಿಜಿಗಳಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ….
ಯುವತಿಯರು ನೆಮ್ಮದಿಯಿಂದ ನಿದ್ದೆ ಮಾಡಬೇಕಾದ ಪಿಜಿಗಳೇ ಈಗ ಆತಂಕದ ತಾಣವಾಗಿವೆಯಾ? ಕಳೆದ ಮೂರು ತಿಂಗಳಿಂದ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಪಿಜಿಗಳಿಗೆ ನುಗ್ಗಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈತನ ಓಡಾಟ ಹಾಗೂ ಅಸಭ್ಯ ವರ್ತನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ..
.ಇಷ್ಟಕ್ಕೇ ಈತನ ಕೃತ್ಯ ನಿಂತಿಲ್ಲ ಎಂಬ ಆರೋಪವೂ ಇದೆ. ಪಿಜಿಗಳಲ್ಲಿ ಒಣಹಾಕಿರುವ ಯುವತಿಯರ ಒಳ ಉಡುಪುಗಳನ್ನು ಕಳವು ಮಾಡಿರುವ ಆರೋಪ ಕೇಳಿಬಂದಿದ್ದು, ಯುವತಿಯರ ಮುಂದೆ ಬೆತ್ತಲೆಯಾಗಿ ನಿಂತು ಅಸಭ್ಯವಾಗಿ ವರ್ತಿಸುವುದು, ಕಿರುಚಾಡದಂತೆ ಬೆದರಿಕೆ ಹಾಕುವುದು ಸೇರಿದಂತೆ ಆತಂಕಕಾರಿ ಕೃತ್ಯಗಳಲ್ಲಿ ತೊಡಗಿದ್ದಾನೆ ಎನ್ನಲಾಗಿದೆ….
ಮೂರು ತಿಂಗಳಿಂದ ಕಿರುಕುಳ ಅನುಭವಿಸುತ್ತಿದ್ದರೆಂಬ ಆರೋಪದ ನಡುವೆಯೂ ಈತನ ಕೃತ್ಯಗಳಿಗೆ ಕಡಿವಾಣ ಬಿದ್ದಿದೆಯೇ? ಯುವತಿಯರ ಸುರಕ್ಷತೆಗೆ ಹೊಣೆ ಯಾರು? ಪಿಜಿಗಳಲ್ಲಿ ವಾಸಿಸುವ ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಯುವತಿಯರಿಗೆ ಸೂಕ್ತ ರಕ್ಷಣೆ ಇದೆಯೇ ಎಂಬ ಪ್ರಶ್ನೆಗಳು ಈಗ ಎದ್ದಿವೆ….
ಈ ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈವರೆಗೆ ಯಾರೂ ಅಧಿಕೃತ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ….
ಈಗ ಪೊಲೀಸರ ಮುಂದಿರುವ ಪ್ರಮುಖ ಸವಾಲು ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ವ್ಯಕ್ತಿಯ ಗುರುತು ಪತ್ತೆಹಚ್ಚಿ, ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವುದು….
ಯುವತಿಯರ ವಸತಿ ನಿಲಯಗಳೇ ಸುರಕ್ಷಿತವಾಗಿಲ್ಲವೆಂಬ ಭಯ ಮೂಡಿಸುವ ಇಂತಹ ಘಟನೆಗಳಿಗೆ ಕಡಿವಾಣ ಬೀಳಬೇಕಿದೆ. ಆರೋಪಿಯ ಗುರುತು ಪತ್ತೆಹಚ್ಚಿ ಬಂಧಿಸುವ ಮೂಲಕ ಯುವತಿಯರಲ್ಲಿ ಭದ್ರತೆಯ ವಿಶ್ವಾಸ ಮೂಡಿಸುವುದು ಪೊಲೀಸರ ಜವಾಬ್ದಾರಿ.
bigtvnews | Hubli Dharwad News | Kannada News | Karnataka News Hubli News | News In Hubli | Local news
