Breaking News

ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ದಂಧೆ ಬೆಳಕಿಗೆ: ಸ್ಮಶಾನದಲ್ಲಿ ಹೂಳಲಾದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ

ರಾಯಚೂರು: ನಗರದ ಮಂತ್ರಾಲಯ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಹೂಳಲಾಗಿದ್ದ ಮೃತದೇಹಗಳು ಹಾಗೂ ಅಸ್ತಿಪಂಜರಗಳನ್ನು ಹೊರತೆಗೆದು ಖಾಸಗಿ ಮೆಡಿಕಲ್ ಕಾಲೇಜಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಸ್ಮಶಾನದ ಸಿಬ್ಬಂದಿ ಕೇವಲ ₹200ರಿಂದ ₹500ಕ್ಕೆ ಮೃತದೇಹಗಳನ್ನು ಮಾರಾಟ ಮಾಡುತ್ತಿದ್ದು, ಶವಗಳನ್ನು ತುಂಡರಿಸಿ ಅಂಗಾಂಗಗಳನ್ನು ಬೇರ್ಪಡಿಸುತ್ತಿದ್ದ ದೃಶ್ಯಗಳನ್ನು ಸ್ಥಳೀಯರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ಪ್ರಕರಣ ಸಂಬಂಧ ಸ್ಮಶಾನದ ಸಿಬ್ಬಂದಿ ವಿರೇಶ್ ಹಾಗೂ ಖಾಸಗಿ ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳಾದ ರಾಜು ಮತ್ತು ಅಪ್ಸರ್ ಅವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ನೆಪಕ್ಕೆ ರ‍್ಯಾಪಿಡೋ ರೈಡರ್ ಆದರೆ ಪ್ರಧಾನಿ ಮೋದಿ ಹತ್ಯೆಗೆ ಜೈಶ್ ಉಗ್ರರೊಂದಿಗೆ ಸಂಚು ರೂಪಿಸುತ್ತಿದ್ದ ವ್ಯಕ್ತಿ ಎಟಿಎಸ್ ಬಲೆಗೆ

ಮುಂಬೈ: ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕ ಹೊಂದಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಪ್ರಚೋದಿಸುವ ಪೋಸ್ಟ್‌ಗಳನ್ನು …

Leave a Reply

Your email address will not be published. Required fields are marked *