ಉಡುಪಿ: ಬ್ರಹ್ಮಾವರದಲ್ಲಿ ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ರೌಡಿಶೀಟರ್ ಸುಜಿತ್ ಪಿಂಟೊ (43) ಹತ್ಯೆಯಲ್ಲಿ ಅಂತ್ಯಗೊಂಡಿದೆ. ಮದ್ಯದ ಅಮಲಿನಲ್ಲಿ ಸುಜಿತ್ ಹಾಗೂ ರಿಕ್ಷಾ ಚಾಲಕ ಪ್ರಮೋದ್ ನಡುವೆ ಜಗಳ ನಡೆದಿದ್ದು, ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸುಜಿತ್ನಿಂದ ಪ್ರಮೋದ್ಗೆ ಹಣ ಪಾವತಿ ಬಾಕಿ ಇದ್ದುದೇ ಗಲಾಟೆಗೆ ಕಾರಣ ಎನ್ನಲಾಗಿದೆ. ಹಲ್ಲೆಯಿಂದ ಸುಜಿತ್ ರಸ್ತೆಯಲ್ಲೇ ಮೃತಪಟ್ಟಿದ್ದು, ಆರೋಪಿ ಪ್ರಮೋದ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ಸುಜಿತ್ 2018ರ ಗುರುಪ್ರಸಾದ್ ಭಟ್ ಹಾಗೂ 2020ರ ಯೋಗೀಶ್ ಪೂಜಾರಿ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

