ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕಟ್ಟುವ ನೆಪದಲ್ಲಿ 42 ವರ್ಷದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ₹2.68 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಇನ್ಶೂರೆನ್ಸ್ ಅವಧಿ ಮುಗಿಯಲಿದೆ ಎಂದು ಕರೆ ಮಾಡಿದ ವಂಚಕ, ವಾಟ್ಸ್‌ಆ್ಯಪ್ ಮೂಲಕ ಲಿಂಕ್ ಕಳುಹಿಸಿದ್ದಾನೆ. ಮಹಿಳೆ ಲಿಂಕ್ ಬಳಸಿ ₹27,764 ಪಾವತಿಸಿದ್ದು, ಬಳಿಕ ವೆರಿಫಿಕೇಶನ್ ನೆಪದಲ್ಲಿ ಬಂದ ಒಟಿಪಿಯನ್ನೂ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅ.23ರಿಂದ 25ರವರೆಗೆ ಹಂತ ಹಂತವಾಗಿ ಮಹಿಳೆಯ ಖಾತೆಯಿಂದ ಒಟ್ಟು ₹2,68,803 ವರ್ಗಾವಣೆಯಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
