Breaking News

ಪೀಣ್ಯದಲ್ಲಿ ಪುಂಡರ ಅಟ್ಟಹಾಸ: ಟೀ, ಕಾಫಿ ಫ್ರೀ ಕೊಡದಿದ್ದಕ್ಕೆ ಬೇಕರಿಯಲ್ಲಿ ಗಲಾಟೆ, ಮಹಿಳಾ ಮಾಲೀಕೆಗೆ ಬೆದರಿಕೆ!

ಬೆಂಗಳೂರು: ಉಚಿತವಾಗಿ ಟೀ, ಕಾಫಿ ನೀಡುವಂತೆ ಒತ್ತಾಯಿಸಿ ಬೇಕರಿಯಲ್ಲಿ ಗಲಾಟೆ ನಡೆಸಿ ಮಹಿಳಾ ಮಾಲೀಕೆಗೆ ಜೀವ ಬೆದರಿಕೆ ಹಾಕಿರುವ ಘಟನೆ ಪೀಣ್ಯದ ಎಚ್‌ಎಂಟಿ ಲೇಔಟ್‌ನಲ್ಲಿ ನಡೆದಿದೆ. ರಥನ್ ಬೇಕರಿಗೆ ಬಂದಿದ್ದ ಕೆಲವರು ಹಣ ಕೇಳಿದ್ದಕ್ಕೆ ಆಕ್ರೋಶಗೊಂಡು, ತಾವು ರೌಡಿಗಳೆಂದು ಅವಾಜ್ ಹಾಕಿದ್ದಾರೆ. ಅಲ್ಲದೆ, ಗಾಜಿನ ಬಾಟಲಿಗಳನ್ನು ಒಡೆದು ಬೇಕರಿಗೆ ಹಾನಿ ಮಾಡಿ, ಮಾಲೀಕೆ ಹಾಗೂ ಅವರ ಕುಟುಂಬದವರನ್ನು ಕೊಲ್ಲುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಮಹೇಶ್ ಮತ್ತು ರಜತ್ ಎಂಬುವವರ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Share News

About BigTv News

Check Also

ಸುರತ್ಕಲ್‌ನಲ್ಲಿ ಠಾಣೆ ಎದುರು ಹೈಡ್ರಾಮಾ; ಯುವಕನ ಶವವನ್ನಿಟ್ಟು ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಶಾಸಕ ಭರತ್ ಶೆಟ್ಟಿ ಭೇಟಿ!

ಮಂಗಳೂರು: ಯುವ ಜೋಡಿಗೆ ಕಿರುಕುಳ ನೀಡಿದ ಆರೋಪದಡಿ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದ ಹೊಸಬೆಟ್ಟು ನಿವಾಸಿ ಸೋಮನಾಥ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. …

Leave a Reply

Your email address will not be published. Required fields are marked *