ಧಾರವಾಡ : ಯುವಕನಿಗೆ ಕುತ್ತಿಗೆಗೆ ಚಾಕು ಇರಿತವಾದ ಘಟನೆ ನಗರದ ಹೊರವಲಯದ ಗ್ರಾಮೀಣ ಠಾಣಾ ವ್ಯಾಪ್ತಿಯಲ ನುಗ್ಗಿಕೇರಿ ಗುಡ್ಡದ ಬಳಿ ನಡೆದಿದೆ.
ಹಾವೇರಿ ಮೂಲದ ನವೀನ್ ದೊಡಮನಿ (೩೦) ಎಂಬುವವನೇ ಚಾಕು ಇರಿತಕ್ಕೆ ಒಳಗಾದವರು. ಯುವಕ ಗುಡ್ಡದಿಂದ ಕೆಳಗೆ ಬಂದು ಪ್ರಾಣ ಉಳಿಸುವಂತೆ ಗೋಗರೆದಿದ್ದಾರೆ. ಯುವಕನ ಸ್ಥಿತಿ ಕಂಡು ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸದ್ಯ ಯುವಕನನ್ನ ಧಾರವಾಡದ ಸಿವಿಲ್ ಅಸ್ಪತೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ರವಾನೆ ಮಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





