Breaking News

ನಂಬಿಸಿ ಕೊಂದ ಪಾಪಿ ಪ್ರಿಯಕರ : ಶವ ಪೊದೆಗೆ ಎಸೆದು ನಾಪತ್ತೆ ನಾಟಕವಾಡಿದ್ದ ಯೋಧ ಜೈಲಿಗೆ

ಬೆಳಗಾವಿ: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರಿಯತಮೆಯನ್ನು ಗೋಕಾಕ್ ಫಾಲ್ಸ್‌ಗೆ ಕರೆದೊಯ್ದು ಕೊಲೆ ಮಾಡಿದ ಆರೋಪದ ಮೇಲೆ ಎಸ್‌ಎಸ್‌ಬಿ ಯೋಧ ಬಸಪ್ಪ ಸಾತಣ್ಣವರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಯಬಾಗ ತಾಲೂಕಿನ ಹಾರೂಗೇರಿಯ 25 ವರ್ಷದ ರಕ್ಷಿತಾ ಕೊಲೆಯಾದ ಯುವತಿ. ಕಳೆದ 3–4 ವರ್ಷಗಳಿಂದ ಪ್ರೀತಿಸುತ್ತಿದ್ದ ಬಸಪ್ಪ, ಅಕ್ಟೋಬರ್ 28ರಂದು ಆಕೆಯನ್ನು ಗೋಕಾಕ್ ಜಲಪಾತಕ್ಕೆ ಕರೆದೊಯ್ದಿದ್ದನು. ಮದುವೆ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಕುತ್ತಿಗೆ ಹಿಸುಕಿ ಹಾಗೂ ವೇಲ್‌ನಿಂದ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಶವವನ್ನು ಗುಡ್ಡದ ಪೊದೆಗಳಲ್ಲಿ ಎಸೆದು, ಯುವತಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದನು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share News

About BigTv News

Check Also

ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಮತ್ತೊರ್ವ ಆರೋಪಿ ಸೆರೆ

ಉಡುಪಿ: ಪೆರ್ಡೂರಿನ ಪ್ರದೀಪ್ ಪೂಜಾರಿ ಮೇಲಿನ ಹಲ್ಲೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೊಬ್ಬ ಆರೋಪಿಯನ್ನು …

Leave a Reply

Your email address will not be published. Required fields are marked *