Breaking News

ಅಂಗನವಾಡಿ ಮಕ್ಕಳ ಹಾಲಿನ ಪುಡಿಯಲ್ಲೂ ಅಕ್ರಮದ ವಾಸನೆ..! ತಪ್ಪಿತಸ್ಥರಿಗೆ ಕಾನೂನಿನ ಬಿಸಿ ಮುಟ್ಟಿಸುವವರು ಯಾರು…?

ಅಧಿಕಾರಿಗಳ ದಾಳಿಗೂ ಮುನ್ನವೇ ಮಾಲು ಮಾಯ..! ಸಿಸಿಟಿವಿ ಸಾಕ್ಷಿ ಪರಿಶೀಲಿಸಲು ಇಲಾಖೆಗೆ ಭಯವೇ?

ಬಡವರ ಅನ್ನಕ್ಕೂ ಕನ್ನ..! ಅಂಗನವಾಡಿ ಮಕ್ಕಳ ಹಾಲಿನ ಪುಡಿಯೂ ಅಂಗಡಿಗಳ ಪಾಲು..!

ಅಂಗಡಿಗಳಲ್ಲಿ ಸರ್ಕಾರಿ ಹಾಲಿನ ಪುಡಿ ರಾಜಾರೋಷವಾಗಿ ಮಾರಾಟದ ಆರೋಪ..!

ಅಧಿಕಾರಿಗಳ ದಾಳಿಗೂ ಮುನ್ನವೇ ಮಾಲು ಮಾಯವಾಗುತ್ತಿದೆಯೇ…? ಅಕ್ರಮಕೋರರಿಗೆ ಇಲಾಖೆಯ ಭಯವೇ ಇಲ್ವಾ…?

ಹುಬ್ಬಳ್ಳಿ: ಬಡವರಿಗಾಗಿ ಸರ್ಕಾರ ನೀಡುವ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟದ ಆರೋಪ ಒಂದೆಡೆಯಾದರೆ, ಮತ್ತೊಂದೆಡೆ ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಾದ ಸರ್ಕಾರದ ಹಾಲಿನ ಪುಡಿ ಪ್ಯಾಕೆಟ್‌ಗಳೇ ಅಂಗಡಿಗಳಲ್ಲಿ ಮಾರಾಟವಾಗುತ್ತಿರುವ ಆರೋಪ ಕೇಳಿಬರುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿ…!

ಅಂಗನವಾಡಿ ಕೇಂದ್ರಗಳ ಮೂಲಕ ಮಕ್ಕಳಿಗೆ ತಲುಪಬೇಕಾದ ಪೌಷ್ಟಿಕ ಆಹಾರವೇ ಅಂಗಡಿಗಳಲ್ಲಿ ಮಾರಾಟಕ್ಕೆ ಬರುತ್ತಿದ್ದರೆ, ಇದರ ಹಿಂದೆ ಇರುವವರು ಯಾರು? ಮಕ್ಕಳ ಆಹಾರದ ಮೇಲೂ ಅಕ್ರಮದ ಕಣ್ಣು ಬಿದ್ದಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ…

ಇನ್ನೂ ಗಂಭೀರವಾದ ಅನುಮಾನವೇನೆಂದರೆ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಪಾಸಣೆಗೆ ಬರುವ ಮುನ್ನವೇ ಮಾಲು ಸೆಟ್ಲ್ ಆಗುತ್ತಿದೆಯೇ…?

ಅಧಿಕಾರಿಗಳು ದಾಳಿ ಅಥವಾ ಪರಿಶೀಲನೆಗೆ ಬರುವ ಮೊದಲೇ ಅಂಗಡಿಗಳಲ್ಲಿರುವ ಹಾಲಿನ ಪುಡಿ ಪ್ಯಾಕೆಟ್‌ಗಳು ಮಾಯವಾಗುತ್ತವೆ, ನಂತರ ಪರಿಶೀಲನೆ ವೇಳೆ ಏನೂ ಸಿಕ್ಕಿಲ್ಲ ಎಂಬ ಉತ್ತರ ಬರುತ್ತದೆ ಎಂಬ ಅನುಮಾನಗಳು ಕೇಳಿಬರುತ್ತಿವೆ. ಹಾಗಾದರೆ ಇಲಾಖೆಯ ಪರಿಶೀಲನೆಗೂ ಮುನ್ನವೇ ಮಾಹಿತಿ ಸೋರಿಕೆಯಾಗುತ್ತಿದೆಯೇ? ಅಥವಾ ಅಕ್ರಮ ಮಾರಾಟದ ಜಾಲಕ್ಕೆ ಯಾರಾದರೂ ರಕ್ಷಣೆ ನೀಡುತ್ತಿದ್ದಾರೆಯೇ….?ಮಾಲ್‌ಗಳನ್ನು ಬೇರೆಡೆಗೆ ಶಿಫ್ಟ್ ಮಾಡಿದರೂ ಸಿಸಿಟಿವಿ ಕ್ಯಾಮೆರಾಗಳಲ್ಲಿ ಅದರ ಜಾಡು ಸೆರೆಯಾಗಿರಬಹುದು..!

ಅಂಗಡಿಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ, ಹಾಲಿನ ಪುಡಿ ಪ್ಯಾಕೆಟ್‌ಗಳನ್ನು ಯಾರು ತಂದರು? ಯಾರು ಸಾಗಿಸಿದರು? ಯಾವ ವಾಹನದಲ್ಲಿ ಸ್ಥಳಾಂತರ ಮಾಡಿದರು? ಎಂಬುದನ್ನು ಪತ್ತೆಹಚ್ಚುವ ಸಾಧ್ಯತೆಯಿದೆ. ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನಿನ ರುಚಿ ತೋರಿಸಬಹುದು…

ಆದರೆ ಇಂತಹ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದೇಕೆ? ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಯಾರಿಗೆ ಭಯ? ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಯಾಗುತ್ತಿರುವ ಶಕ್ತಿಗಳು ಯಾವುವು? ಎಂಬ ಪ್ರಶ್ನೆಗಳು ಮೂಡುತ್ತಿವೆ. ಇದು ನಿಜಕ್ಕೂ ದುರಂತ..!

ಅಧಿಕಾರಿಗಳು ಬರುವ ಮುನ್ನವೇ ಮಾಲು ಖಾಲಿ, ಪರಿಶೀಲನೆ ಬಳಿಕ ಏನೂ ಸಿಕ್ಕಿಲ್ಲ ಎಂಬ ವರದಿ..! ಹಾಗಾದರೆ ಅಕ್ರಮದ ಮೂಲ ಪತ್ತೆಹಚ್ಚುವವರು ಯಾರು…?

ಒಂದೆಡೆ ಅನ್ನಭಾಗ್ಯದ ಅಕ್ಕಿಯ ಅಕ್ರಮದ ಆರೋಪ, ಮತ್ತೊಂದೆಡೆ ಅಂಗನವಾಡಿ ಮಕ್ಕಳ ಹಾಲಿನ ಪುಡಿಯ ಮಾರಾಟದ ಆರೋಪ. ಸರ್ಕಾರದ ಯೋಜನೆಗಳೇ ಕೆಲವರ ಅಕ್ರಮ ವ್ಯವಹಾರಕ್ಕೆ ದಾರಿಯಾಗುತ್ತಿವೆಯೇ ಎಂಬ ಪ್ರಶ್ನೆ ಎದುರಾಗಿದೆ…

ಸಂಬಂಧಪಟ್ಟ ಆಹಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕೂಡಲೇ ಜಂಟಿ ಪರಿಶೀಲನೆ ನಡೆಸಬೇಕು. ಅಂಗಡಿಗಳಲ್ಲಿ ಸಿಗುತ್ತಿರುವ ಹಾಲಿನ ಪುಡಿ ಪ್ಯಾಕೆಟ್‌ಗಳ ಮೂಲ ಪತ್ತೆಹಚ್ಚಬೇಕು. ಯಾವ ಅಂಗನವಾಡಿ ಕೇಂದ್ರಕ್ಕೆ ಎಷ್ಟು ಪ್ರಮಾಣದ ಹಾಲಿನ ಪುಡಿ ಪೂರೈಕೆಯಾಗಿದೆ? ಎಷ್ಟು ಪ್ರಮಾಣ ಫಲಾನುಭವಿಗಳಿಗೆ ವಿತರಿಸಲಾಗಿದೆ? ಉಳಿದ ಪ್ಯಾಕೆಟ್‌ಗಳ ಲೆಕ್ಕವೇನು? ಎಂಬುದನ್ನು ಪರಿಶೀಲಿಸಬೇಕು…

ಅಕ್ರಮ ಮಾರಾಟದಲ್ಲಿ ಅಧಿಕಾರಿಗಳು ಅಥವಾ ಸಿಬ್ಬಂದಿಯ ಪಾತ್ರವಿದೆಯೇ ಎಂಬ ಬಗ್ಗೆಯೂ ನಿಷ್ಪಕ್ಷಪಾತ ತನಿಖೆಯಾಗಬೇಕು. ಆರೋಪಗಳು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ FIR ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು…

ಬಡವರ ಅನ್ನಕ್ಕೂ ಕನ್ನ, ಮಕ್ಕಳ ಹಾಲಿನ ಪುಡಿಯಲ್ಲೂ ಅಕ್ರಮದ ಆರೋಪ..!ಸರ್ಕಾರದ ಯೋಜನೆಗಳು ಬಡವರ ಮತ್ತು ಮಕ್ಕಳ ಹೊಟ್ಟೆ ಸೇರಬೇಕೇ ಹೊರತು ಅಕ್ರಮ ದಂಧೆಕೋರರ ಜೇಬು ಸೇರಬಾರದು….

ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರಾ? ಅಕ್ರಮದ ಜಾಲವನ್ನು ಬಯಲಿಗೆಳೆಯುತ್ತಾರಾ? ಅಥವಾ ದಾಳಿಗೂ ಮುನ್ನವೇ ಮಾಲು ಮಾಯವಾಗುವ ಆಟ ಮುಂದುವರಿಯುತ್ತದೆಯೇ…?

ಇದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಉತ್ತರ ನೀಡಬೇಕಿದೆ.

Share News

About Shaikh BigTv

Check Also

ಪಾರ್ಟ್‌ಟೈಮ್‌ ಉದ್ಯೋಗದ ಆಮಿಷ: 1.86 ಲಕ್ಷ ರೂ. ವಂಚನೆ

ಕುಂದಾಪುರದ ಗುಲ್ವಾಡಿ ಗ್ರಾಮದ ಸೌಕೂರಿನಲ್ಲಿ ಪಾರ್ಟ್‌ಟೈಮ್ ಉದ್ಯೋಗದ ಜಾಹೀರಾತು ನಂಬಿದ ಮಹಿಳೆಯೊಬ್ಬರು ಸೈಬರ್ ವಂಚಕರಿಂದ ₹1,86,570 ಕಳೆದುಕೊಂಡಿದ್ದಾರೆ. ರೇಣುಕಾ ಗಣೇಶ …

Leave a Reply

Your email address will not be published. Required fields are marked *