Breaking News

ಗೋಕಾಕ್ ಜಲಪಾತದಲ್ಲಿ ಭೀಕರ ಕೃತ್ಯ: ಪ್ರಿಯತಮೆ ಹತ್ಯೆಗೈದ ಎಸ್‌ಎಸ್‌ಬಿ ಕಾನ್‌ಸ್ಟೆಬಲ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ!

ಬೆಳಗಾವಿ: ಮದುವೆಯಾಗುವ ವಿಚಾರವಾಗಿ ಮಾತುಕತೆ ನಡೆಸುವ ನೆಪದಲ್ಲಿ ಪ್ರಿಯತಮೆಯನ್ನು ಗೋಕಾಕ್ ಜಲಪಾತಕ್ಕೆ ಕರೆದೊಯ್ದು ಕೊಲೆ ಮಾಡಿದ ಆರೋಪದ ಮೇಲೆ ಎಸ್‌ಎಸ್‌ಬಿ ಕಾನ್‌ಸ್ಟೆಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ 23 ವರ್ಷದ ರಕ್ಷಿತಾ ಸರಿಕಾರ್ ಕೊಲೆಯಾದ ಯುವತಿ. ಅಕ್ಟೋಬರ್ 28ರಂದು ಮದುವೆ ವಿಚಾರವಾಗಿ ಚರ್ಚಿಸುವ ನೆಪದಲ್ಲಿ ಆಕೆಯನ್ನು ಜಲಪಾತಕ್ಕೆ ಕರೆದೊಯ್ದಿದ್ದ ಬಸಪ್ಪ ಸತನ್ನವರ (29), ಜಗಳದ ವೇಳೆ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಗುಡ್ಡದ ಪೊದೆಗಳಲ್ಲಿ ಎಸೆದು ಪರಾರಿಯಾಗಿದ್ದನು. ರಕ್ಷಿತಾ ಕಾಣೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ನವೆಂಬರ್ 1ರಂದು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿ ಬಸಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *