Breaking News

KPSC ನೇಮಕಾತಿಯಲ್ಲಿ ಅಕ್ರಮ ಪ್ರಕರಣ : ಸದಸ್ಯೆ ಬಿ.ವಿ ಗೀತಾ ಮನೆಯ ಮೇಲೆ SIT ದಾಳಿ!

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರ ನಿವಾಸದ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಭ್ಯರ್ಥಿ ನಂದೀಶ್ ಅವರಿಂದ ರಾಜಮಹಲ್ ವಿಲಾಸ್ ಕ್ಲಬ್ ಬಳಿ ₹20 ಲಕ್ಷ ಹಣ ಪಡೆದ ಆರೋಪ ಗೀತಾ ಅವರ ಮೇಲಿದೆ. ತಮ್ಮ ಕಾರಿನಲ್ಲಿ ತೆರಳಿ ಹಣ ಪಡೆದಿದ್ದಾರೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನೊಂದೆಡೆ, ಬಿ.ವಿ. ಗೀತಾ ಅವರನ್ನು ಅಮಾನತುಗೊಳಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ರಾಜ್ಯಪಾಲರಿಗೆ ಶಿಫಾರಸು ಮಾಡುವ ಸಾಧ್ಯತೆಯಿದೆ. ಅಧಿಕಾರ ದುರ್ಬಳಕೆ ಮತ್ತು ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

Share News

About BigTv News

Check Also

ಬರೋಬ್ಬರಿ 45 ಕೋಟಿ ಭೂ ಹಗರಣ: ಬಾಗೇಪಲ್ಲಿ ತಹಶೀಲ್ದಾರ್ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶ: ನಾಲ್ವರು ಸಿಬ್ಬಂದಿಗಳು ಅಮಾನತು

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಹಶೀಲ್ದಾರ್ ಮನೀಷಾ ಪತ್ರಿ ವಿರುದ್ಧ ₹45 ಕೋಟಿ ಮೌಲ್ಯದ ಭೂ ಅಕ್ರಮದ ಆರೋಪ ಕೇಳಿಬಂದಿದೆ. ನಾಲ್ವರು …

Leave a Reply

Your email address will not be published. Required fields are marked *