Breaking News

ಹಣಕಾಸಿನ ವೈಮನಸ್ಸು: 64 ವರ್ಷದ ವ್ಯಕ್ತಿಯ ಭೀಕರ ಕೊಲೆ ಪ್ರಕರಣ ಭೇದಿಸಿದ ಹುನಗುಂದ ಪೊಲೀಸರು

ಬಾಗಲಕೋಟೆ:ಹುನಗುಂದ ತಾಲೂಕಿನ ಹೂವನೂರ ಗ್ರಾಮದ ಅಶೋಕ ಅಂಗಡಿ (64) ಎಂಬುವವರನ್ನು ಹಣಕಾಸಿನ ವ್ಯವಹಾರದ ವೈಮನಸ್ಸಿನಿಂದ ಕೊಲೆ ಮಾಡಿ, ಮೃತದೇಹವನ್ನು ತುಂಡರಿಸಿ ಎರಡು ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ಪತ್ರೆ ನಡೆಸಲು ಪಡೆದ ಸಾಲದ ಹಣ ಹಾಗೂ ಬಾಕಿ ಬಾಡಿಗೆ ವಿಚಾರವಾಗಿ ಉಂಟಾದ ಜಗಳವೇ ಕೊಲೆಗೆ ಕಾರಣ ಎನ್ನಲಾಗಿದೆ. ಮಾರ್ಚ್ 12ರಂದು ಆರೋಪಿಗಳು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ, ಮೃತದೇಹವನ್ನು ಕಾರಿನಲ್ಲಿ ವಿಜಯಪುರಕ್ಕೆ ಸಾಗಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ. ಬಾವಿಯಿಂದ ಎರಡು ಟ್ರಂಕ್‌ಗಳು ಹಾಗೂ ಮೃತದೇಹದ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ.

Share News

About BigTv News

Check Also

KPSC ನೇಮಕಾತಿಯಲ್ಲಿ ಅಕ್ರಮ ಪ್ರಕರಣ : ಸದಸ್ಯೆ ಬಿ.ವಿ ಗೀತಾ ಮನೆಯ ಮೇಲೆ SIT ದಾಳಿ!

ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರ ನಿವಾಸದ ಮೇಲೆ ಎಸ್‌ಐಟಿ …

Leave a Reply

Your email address will not be published. Required fields are marked *