Breaking News

ಭೇಟೆಗೆ ಸಜ್ಜಾದ ಭಾರತದ ಹುಲಿಗಳು, ಗರ್ಜನೆಗೆ ಹೆದರಿದ ಹರಿಣಗಳು

ಲಂಡನ್:
ರಂಜಾನ್
ಹಬ್ಬದ ದಿನವಾದ ಇಂದಿನಿಂದಲ್ಲೇ ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಡವಡವಆರಂಭವಾಗಿದೆ. ಒಂದು ಕಡೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಲಿದ್ದು, ಈ
ಭಾರಿ ಕಪ್ ನಮ್ದೆ ಎಂಬ ಅಭಿಮಾನ ವ್ಯಕ್ತವಾಗುತ್ತಿದೆ. ಕ್ರಿಕೇಟ್ ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಪಡೆ
ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್
ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ಇಂಗ್ಲೆಂಡ್‍ನಲ್ಲಿ
ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರ ಸೌತಾಂಪ್ಟನ್‍ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ
ಬಲಿಷ್ಠ ತಂಡಗಳ ಕಾಳಗಕ್ಕೆ ಅಖಾಡ ಸಿದ್ಧವಾಗಿದೆ. ಇಂದು ಭಾರತ ತನ್ನ ಮೊದಲ ಲೀಗ್ ಪಂದ್ಯವಾಡಲಿದೆ.
ಈಗಾಗಲೇ ಎರಡು ಲೀಗ್ ಮ್ಯಾಚ್ ಆಡಿ ಸೋತಿರುವ ದಕ್ಷಿಣ ಆಫ್ರಿಕಾದ ವಿರುದ್ಧ ಟೀಂ ಇಂಡಿಯಾ
ಕಣಕ್ಕಿಳಿಯಲಿದೆ. ವಿಶ್ವಕಪ್‍ನಲ್ಲಿ ಫೇವರೆಟ್ ಟೀಂ ಆಗಿರುವ ಕೊಹ್ಲಿ ಪಡೆ, ಗೆದ್ದು
ಶುಭಾರಂಭ ಮಾಡಲು ತಂತ್ರ ರೂಪಿಸಿದೆ. ಶಿಖರ್, ರೋಹಿತ್ ಓಪನರ್ಸ್ ಆಗಿ ಕಣಕ್ಕಿಳಿದ್ರೆ, ಮೀಡಲ್
ಆರ್ಡರ್ ನಲ್ಲಿ ಕೊಹ್ಲಿ, ಕೆಎಲ್ ರಾಹುಲ್, ಧೋನಿ ಪ್ರಾಬಲ್ಯ ಮೆರೆದ್ರೆ
ಸ್ಲಾಗ್ ಓವರ್ಸ್‍ನಲ್ಲಿ ಪಾಂಡ್ಯ ಮತ್ತು ಜಡೇಜಾ ಮಿಂಚಲಿದ್ದಾರೆ. ಬೌಲಿಂಗ್‍ನಲ್ಲಿ ಸ್ಪೀನ್
ಮೋಡಿಗೆ ಕುಲ್‍ದೀಪ್ ಮತ್ತು ಚಹಾಲ್ ಭರ್ಜರಿ ತಯಾರಿ
ನಡೆಸಿದ್ದಾರೆ. ಹಾಗೂ ಬೂಮ್ರಾ
ಮತ್ತು ಭುವನೇಶ್ವರ್ ಎದುರಾಳಿಗಳನ್ನು ಕಟ್ಟಿಹಾಕಲು ರೆಡಿ ಇದ್ದಾರೆ.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *