Breaking News

ಬಾಲಿಷವಾದ ಹೇಳಿಕೆಯನ್ನು ನೀಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ

ಕೃಷ್ಣರಾಜಪೇಟೆ ಶಾಸಕ ಡಾ.ನಾರಾಯಣಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೆ.ಆರ್.ಪೇಟೆ ಪಟ್ಟಣದ ಅಭಿವೃದ್ಧಿಗೆ ಶಾಸಕರ ಕೊಡುಗೆ ಶೂನ್ಯ ಎಂದು ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ಪುರಸಭೆ ಸದಸ್ಯರಾದ ಕೆ.ಬಿ.ಮಹೇಶ್, ಕೆ.ಸಿ.ಮಂಜುನಾಥ್, ಕೆ.ಆರ್.ರವೀಂದ್ರಬಾಬು ಮತ್ತು ಡಿ.ಪ್ರೇಮಕುಮಾರ್ ಅವರ ಹೇಳಿಕೆಯನ್ನು ಜೆಡಿಎಸ್ ಪುರಸಭೆ ಸದಸ್ಯರು ತೀವ್ರವಾಗಿ ಖಂಡಿಸಿ ಮಾತು ಹಿತವಾಗಿರಬೇಕು. ಬಾಲಿಷವಾದ ಹೇಳಿಕೆಯನ್ನು ನೀಡಿದರೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಕೆ.ಎಸ್.ಸಂತೋಷ್ ಕುಮಾರ್, ಶಾಮಿಯಾನ ತಿಮ್ಮೇಗೌಡ, ಹೆಚ್.ಆರ್.ಲೋಕೇಶ್ ಮತ್ತು ಜೆಡಿಎಸ್ ಮುಖಂಡ ಕೆ.ವಿನೋದ್ ಕುಮಾರ್ ಎಚ್ಚರಿಕೆ ನೀಡಿದರು…‌ಕೆ.ಆರ್.ಪೇಟೆ ಪುರಸಭೆಯ 30 ವರ್ಷಗಳ ಕಾಂಗ್ರೆಸ್ ದುರಾಡಳಿತಕ್ಕೆ ಪಟ್ಟಣದ ಜನತೆ ತಕ್ಕಪಾಠ ಕಲಿಸಿದ್ದು ಬದಲಾವಣೆಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದ್ದಾರೆ…ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಜೆಡಿಎಸ್ ಹಿಡಿಯುವುದು ನಿಶ್ಚಿತವಾಗಿದೆ.. ‌ಇದೇ ಮೊದಲ ಬಾರಿಗೆ ಪುರಸಭೆಯ ಅಧಿಕಾರವನ್ನು ಹಿಡಿಯಲಾಗದೇ ಕಾಂಗ್ರೆಸ್ ಒಳಗೊಳಗೇ ಬೇಗುದಿಯನ್ನು ಅನುಭವಿಸುತ್ತಿದೆ. ಪಟ್ಟಣದ ಸಮಗ್ರವಾದ ಅಭಿವೃದ್ಧಿಗೆ ಸಂಕಲ್ಪ ಮಾಡಿರುವ ಶಾಸಕರು 12 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿಕೊಟ್ಟಿದ್ದಾರೆ. ವಿರೋಧ ಪಕ್ಷವಾಗಿ ಕೆಲಸ ಮಾಡಲು ತಿಳಿಯದ ಕಾಂಗ್ರೆಸ್ ಪುರಸಭೆ ಸದಸ್ಯರು ಹತಾಶರಾಗಿ ಅಸಂಬದ್ಧ ಹೇಳಿಕೆ ನೀಡುತ್ತಾ ಜೆಡಿಎಸ್ ಸದಸ್ಯರನ್ನು ಸೆಳೆದುಕೊಂಡು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಸಂಚು ಮಾಡುತ್ತಿದ್ದಾರೆ. ಆದರೆ ಅವರ ಕನಸು ತಿರುಕನು ಕಂಡ ಕನಸಾಗುತ್ತದೆ ಎಂದು ಸಂತೋಷ್ ವ್ಯಂಗ್ಯವಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪುರಸಭೆಯ ಸದಸ್ಯರಾದ ಸಂತೋಷ್, ಲೋಕೇಶ್, ತಿಮ್ಮೇಗೌಡ, ಗಿರೀಶ್, ಪ್ರಮೋದ್, ಅಶೋಕ್, ಮುಖಂಡರಾದ ವಿನೋದ್ ಕುಮಾರ್, ಕೆ.ಎಸ್.ಹರಪ್ರಸಾದ್, ಶ್ರೀನಿವಾಸ್, ಮಂಜುನಾಥ್, ದಿನೇಶ್, ವಿಶ್ವನಾಥ, ಕೊಮ್ಮೇನಹಳ್ಳಿ ಜಗಧೀಶ್, ಅಗ್ರಹಾರಬಾಚಹಳ್ಳಿ ನಾಗೇಶ್, ದಯಾನಂದ ಮತ್ತಿತರರು ಭಾಗವಹಿಸಿದ್ದರು..

Share News

About admin

Check Also

ನಳಿನ್ ಕುಮಾ‌ರ್, ರಾಜ್ಯಾಧ್ಯಕ್ಷರಾಗಲಿ ಎಂದು ಕಾಂಗ್ರೆಸ್ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇರಳ ದೇವಸ್ಥಾನದಲ್ಲಿ ಪ್ರಾರ್ಥನೆ.

ಗಡಿನಾಡು ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಡಿಕೆಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಳದಲ್ಲಿ ಪ್ರಾರ್ಥನೆ …

Leave a Reply

Your email address will not be published. Required fields are marked *