ದಾವಣಗೆರೆಯಲ್ಲಿ ‘ಕೈ’ ಕಲಹ ಸ್ಫೋಟ: ಜಮೀರ್ ಕೆಣಕಿದರೆ ಕಾಂಗ್ರೆಸ್‌ಗೆ 20 ಸೀಟೂ ಕಷ್ಟ!
ಜಮೀರ್ ವಿರುದ್ಧ ಸಂಚು ಆರೋಪ: ಸುಬಾನ್ ಖಾನ್‌ನಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ವಾರ್ನಿಂಗ್!
ಅಲ್ಪಸಂಖ್ಯಾತ ನಾಯಕರ ಅವಮಾನ: ಹೊಸ ಪಕ್ಷ ಹುಟ್ಟಿಸುವ ಬೆದರಿಕೆ!
ದಾವಣಗೆರೆ ಉಪಚುನಾವಣೆಯಲ್ಲಿ ಒಳಜಗಳ ಬಯಲು: ಸುಬಾನ್ ಖಾನ್ ಶಾಕ್ ಹೇಳಿಕೆದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ, ಸಚಿವ Zameer Ahmed Khan ಅವರನ್ನು ಕೆಣಕಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಸುಬಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ…

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಬಾನ್ ಖಾನ್, ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು. “ಒಂದು ವೇಳೆ ಜಮೀರ್ ಅವರಿಗೆ ಅನ್ಯಾಯವಾದರೆ, ಕಾಂಗ್ರೆಸ್‌ಗೆ 20 ಸೀಟು ಕೂಡ ಕಷ್ಟ” ಎಂದು ಸ್ಪಷ್ಟವಾಗಿ ಹೇಳಿದರು…
ಇದಲ್ಲದೆ, Siddaramaiah ಅವರ ನಡೆಗೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಉಪಚುನಾವಣೆ ವೇಳೆ ಕೆಲವು ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದರು..
ಪಕ್ಷದೊಳಗಿನ ಕ್ರಮಗಳ ಕುರಿತು ಮಾತನಾಡಿದ ಸುಬಾನ್ ಖಾನ್, ಸ್ಥಳೀಯ ನಾಯಕತ್ವದ ವಿರುದ್ಧ ಕಿಡಿಕಾರಿದರು…

ಜೊತೆಗೆ, ಸಾದಿಕ್ ಪೈಲ್ವಾನ್ ಅವರ ನಾಮಿನೇಷನ್ ಹಿಂದೆ ತಾವು ಇದ್ದುದನ್ನು ಬಹಿರಂಗಪಡಿಸಿ, ನಂತರದ ಯು-ಟರ್ನ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು…
ಅಷ್ಟೇ ಅಲ್ಲದೆ, ಅಲ್ಪಸಂಖ್ಯಾತ ನಾಯಕರಿಗೆ ನ್ಯಾಯ ಸಿಗದಿದ್ದರೆ ಹೊಸ ಪ್ರಾದೇಶಿಕ ಪಕ್ಷ ಹುಟ್ಟುವುದು ಖಚಿತ ಎಂದು ಎಚ್ಚರಿಸಿದ ಅವರು, “ನಾವು ಗೆಲ್ಲದೇ ಇದ್ದರೂ ಕಾಂಗ್ರೆಸ್ ಅನ್ನು ಸೋಲಿಸುತ್ತೇವೆ” ಎಂದು ತೀವ್ರ ಹೇಳಿಕೆ ನೀಡಿದ್ದಾರೆ…
ದಾವಣಗೆರೆಯಲ್ಲಿ ಸ್ಫೋಟಗೊಂಡಿರುವ ಈ ಒಳಜಗಳ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

