ಕೋಲಾರ ನಗರಸಭೆಗೆ ಡಿಸಿ ಮಂಜುನಾಥ್ ದಿಢೀರ್ ಭೇಟಿ ನೀಡಿ ಕಡತಗಳ ಪರಿಶೀಲನೆ ಮಾಡಿದರು. ಕೋಲಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಡಿಸಿ ಮಂಜುನಾಥ್ ರವರು ನಗರಸಭೆ ಎಇ, ಎಇಇ ಯನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಟೆಂಡರ್ ಆಗಿದ್ದರು ಗುತ್ತಿಗೆದಾರರಿಂದ ಕೆಲಸ ಮಾಡಿಸದ ಇಂಜಿನಿಯರ್ ಗಳು ಬಗ್ಗೆ ತೀವ್ರ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಇನ್ನೂ ಡಿಸಿಗೆ ತಪ್ಪು ಮಾಹಿತಿ ನೀಡಿದ ಎಇಇ ಪೂಜಾರಪ್ಪ ಗೆ ತೀವ್ರ ತರಾಟೆ ತೆಗೆದುಕೊಂಡು, ಟೆಂಡರ್ ಕರೆದು ಎರಡು ತಿಂಗಳಾದರೂ ಕೆಲಸ ಆರಂಭಿಸದ ಅಧಿಕಾರಿಗಳ ವಿರುದ್ಧ ಗರಂ ಅದರು.ಹಾಗೂ ವಾರ್ಡುವಾರು ನೀರಿನ ಸಮಸ್ಯೆ ಕುರಿತು ಮಾಹಿತಿ ನೀಡಲು ಅಧಿಕಾರಿಗಳು ಇದೇ ವೇಳೆ ತಡಬಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





