ಬರಿ ಗುಡಿ, ಮಠಗಳಿಗೆ ನೆರವು ಹಸ್ತ ನೀಡುವ ರಾಜಕಾರಣಿಗಳು ಜನರ ಸಮಸ್ಯೆಗೆ ಸ್ಪಂದಿಸುವುದು ಅತೀ ವಿರಳ. ಆದ್ರೇ ಕುಂದಾನಗರೀಯಲ್ಲಿ ಬಡ ರೋಗಿಯ ನೆರವಿಗೆ ಶಾಸಕಿ ಮುಂದಾಗಿದ್ದಾರೆ. ಖಾನಾಪುರ ಶಾಸಕಿ ಅಂಜಲಿ ನಿಂಬಾಳಕರ್ ರವರು ತಾಲೂಕಿನ ಮೆಂಡೆಗಾಳಿ ಗ್ರಾಮದ ರೋಗಿ ಮುರಳಿಧರ್ ಕಾಕತಕರಗೆ ಸಹಾಯ ಹಸ್ತ ನೀಡಿದ್ದಾರೆ. ಮೂತ್ರಪಿಂಡ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ಪರಿಹಾರ ನೀಡಿದರು. ತುರ್ತು ಚಿಕಿತ್ಸೆಗಾಗಿ ಖುದ್ದು ಸಿಎಂ ಭೇಟಿ ಮಾಡಿ ಪರಿಹಾರ ಒದಗಿಸುವಲ್ಲಿ ಶಾಸಕಿ ಅಂಜಲಿ ನಿಂಬಾಳಕರ ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





