ಜಮೀನಿನಲ್ಲಿ ಬೀಡುಬಿಟ್ಟಿದ್ದ ಕುರಿ ಕಳ್ಳತನಕ್ಕೆ ಬಂದಿದ್ದ ಖದೀಮರ ಗ್ಯಾಂಗ್ ಪಾರ್ಟಿ ಮಾಡಲು ಕುರಿ ಕೊಡಿ ಎಂದು ಕುರಿಗಾಯಿಗಳಿಗೆ ಧಮ್ಕಿ ಹಾಕಿದ್ದಾರೆ. ಕುರಿ ಕೊಡದೇ ಇದ್ದಾಗ ಏಕಾಏಕಿ ಹಲ್ಲೆಗೈದು ಪರಾರಿಯಾಗಿದ್ದಾರೆ.ಬೆಳಗಾವಿ ಹೊರವಲಯದ ಮಜ್ಜಗಾವಿಯಲ್ಲಿ ಈ ಘಟನೆ ನಡೆದಿದೆ.ಗಾಯಾಳು ಕುರಿಗಾರರು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಲಿಸಲಾಗಿದೆ. ಆನಂದ ಕಲ್ಲೊಳ್ಳರ್, ಯಲ್ಲಪ್ಪ ಕಲ್ಲೊಳ್ಕರ್, ಗಂಗಾರಾಮ್ ಬೆಳಗಾಂವಕರ್ ಅವರ ಕಣ್ಣು, ಕೈ, ಹೊಟ್ಟೆ, ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

