ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶ ಗಳಿಗೆ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು .ಬಳಿಕ ಮಾತನಾಡಿದ ಅವರು, ನೆರೆ ಯಿಂದ ಹಾನಿಗೊಳಗಿರುವ ಸಂತ್ರಸ್ತರಿಗೆ ಸರಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದರು.ತಾತ್ಕಾಲಿಕ ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರಸಂಪೂರ್ಣ ಹಾನಿ ಯಾದ ಮನೆಗೆ ಹೊಸಮನೆ ನಿರ್ಮಾಣ ಭರವಸೆ ನೀಡಿದರು.ನೆರೆ ಹಾವಳಿಯಿಂದ 321 ಮನೆ ಭಾಗಶಃ ಹಾನಿಗೊಳಗಾಗಿದ್ದು, 275 ಮನೆ ಸಂಪೂರ್ಣ ಹಾನಿಗೊಳಗಾಗಿವೆ. ಹೀಗಾಗಿ ತಾತ್ಕಾಲಿಕವಾಗಿ 5 ಸಾವಿರ ಬಾಡಿಗೆ ಮನೆ ನಿರ್ಮಿಸಲಾಗಿದೆ.ಪ್ರತಿ ಮನೆ ರಿಪೇರಿಗೆ 1 ಲಕ್ಷ ತಕ್ಷಣ ಪರಿಹಾರ ಒದಗಿಸಲಾಗುವುದು. 15 ದಿವಸದಲ್ಲಿ ಕೆಲಸ ಪ್ರಾರಂಭಿಸಲಾಗುವುದು. ಸೈಟ್ ಇಲ್ಲದವರಿಗೆ ಹೊಸ ಸೈಟ್ ನೀಡಲಾಗುತ್ತದೆ. ಕೃಷಿ, ಸಾರ್ವಜನಿಕ ಹಾನಿ ಸಂಬಂಧಿಸಿ ಸಮೀಕ್ಷೆ ಪಟ್ಟಿ ಮಾಡಿ ಪರಿಹಾರಕ್ಕೆ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.ಬೆಳ್ತಂಗಡಿ ತಾಲ್ಲೂಕುನಲ್ಲಿ ಮಳೆಯಿಂದ ಅಪಾರ ಹಾನಿ ಆಗಿದ್ದು ಕುಕ್ಕವು ಸೇತುವೆ ಹಾನಿ ಆಗಿದೆ .ಈ ಪ್ರದೇಶ ಕ್ಕೂ ಯಡಿಯೂರಪ್ಪ ಭೇಟಿ ನೀಡಿದರು .ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೆರೆ ಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಶಾಸಕರು ಸೇರಿದಂತೆ ಶಾಸಕರು ಜಿಲ್ಲಾಡಳಿತ ದ ಅಧಿಕಾರಿಗಳು ಉಪಸ್ಥಿತರಿದ್ದರು .
bigtvnews | Hubli Dharwad News | Kannada News | Karnataka News Hubli News | News In Hubli | Local news





