Breaking News

ಯಾವ ಹುದ್ದೆಗೆ ರಾಜಿನಾಮೆ ಕೊಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತೀನಿ.

ಮಹಾನಗರ ಪಾಲಿಕೆ ಸದಸ್ಯರಾಗಿದ್ದ ಎಸ್.ಮುನಿಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದರ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುದ್ದೆಗಳಲ್ಲಿ ಮುಂದುವರೆಯುವ ಸಂಸದರು ಯಾವ ಹುದ್ದೆಗೆ ರಾಜೀನಾಮೆ ನೀಡಬೇಕೆಂಬುದರ ಬಗ್ಗೆ ಯೋಚನೆ ಮಾಡುತ್ತಿದ್ದೇನೆಂದು ಕೋಲಾರದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಹೇಳಿಕೆ ನೀಡಿದರು. ಬಿಬಿಎಂಪಿ ಕಾಡುಗುಡಿ ಕಾರ್ಪೋರೇಟರ್ ಸಹ ಆಗಿರುವ ಎಸ್.ಮುನಿಸ್ವಾಮಿ ಈಗ ಕೋಲಾರದ ಸಂಸದರು ಸಹ ಆಗಿದ್ದಾರೆ. ಹೀಗಾಗಿ ಯಾವ ಪದವಿಗೆ ರಾಜಿನಾಮೆ ಕೊಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡ್ತೀನಿ. ಇದರ ಬಗ್ಗೆ ಪಕ್ಷದ ವರಿಷ್ಟರಲ್ಲಿ ಈ ಬಗ್ಗೆ ಚರ್ಚಿಸುತ್ತಿದ್ದೇನೆ. ಕಾನೂನಲ್ಲಿ ರಾಜೀನಾಮೆ ಕೊಡಬೇಕು ಎನ್ನುವುದಿದ್ರೆ ಕೊಡ್ತೀನಿ. ಒಂದು ಹುದ್ದೆ ಬಿಡೋದಿಕ್ಕೆ ಸಿದ್ದವಿದ್ದೇನೆ, ಆರು ತಿಂಗಳು ಸಮಯವಿದೆ ಎಂದರು. ಇನ್ನೂ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡಿದ ಅವರು ಹಳ್ಳಿಗಳ ಬಗ್ಗೆ ಅಧ್ಯಯನಕ್ಕಾಗಿ ಫಾರಿನ್ನೋರು ಮಾಡೋದು ಗ್ರಾಮವಾಸ್ತವ್ಯ. ಗ್ರಾಮವಾಸ್ತವ್ಯದಿಂದ ಅಲ್ಲಿನ ಸಮಸ್ಯೆ ಬಗೆಹರಿಸುವಂತೆ ಮಾದರಿ ಆಗಬೇಕು ಎಂದು ಟೀಕೆ ಮಾಡಿದರು.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *