Breaking News

ಮೈತ್ರಿಗೆ ಸಾರ್ಟ್ ಆಯ್ತು ಸ್ಟಾಫ್ ವಾಚ್

ಮೈತ್ರಿ ಸರ್ಕಾರಕ್ಕೆ ಬಿಎಸ್​ಪಿಯಿಂದಲೂ ಬೆಂಬಲ ವಾಪಸ್ ಸಾಧ್ಯತೆ..!ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ರೀತಿಯ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಶಾಸಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವುದೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷಗಳ ನಾಯಕರಿಗೆ ತಲೆ ನೋವಾಗಿ ಪರಿಣಮಿಸಿದೆ. ಪಕ್ಷದಲ್ಲಿ ಎಷ್ಟೋ ಘಟಾನುಘಟಿ ಹಾಗೂ ಅನುಭವಿ ನಾಯಕರುಗಳಿದ್ದರೂ ಶಾಸಕರನ್ನು ಪಕ್ಷದಲ್ಲಿಯೇ ಮುಂದುವರೆಸಿಕೊಂಡು ಹೋಗುವಲ್ಲಿ ಮುಖಂಡರು ಎಡವಿದ್ದಾರೆ. ಇತ್ತೀಚೆಗಷ್ಟೇ ವಿಜಯನಗರ ಶಾಸಕರಾದ ಆನಂದ ಸಿಂಗ್ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅಧಿಕೃತವಾಗಿ ರಾಜೀನಾಮೆ ಘೋಷಣೆ ಮಾಡಿದ್ದರು. ಈಗ ಮೈತ್ರಿ ಸರ್ಕಾರಕ್ಕೆ ದೋಸ್ತಿಗಳ ಸುಮಾರು 14 ಶಾಸಕರು ರಾಜೀನಾಮೆ ನೀಡುತ್ತಿರುವುದು ಅಧಿಕೃತವಾಗಿದೆ. ಈ ರಾಜೀನಾಮೆ ಪರ್ವ ಕೊನೆಗೊಳ್ಳುವ ಮೊದಲೇ ಮತ್ತೊಂದು ಶಾಕ್ ಎದುರಾಗಿದೆ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಬಿಎಸ್​​ಪಿ ಶಾಸಕ ಮಹೇಶ್​, ಬೆಂಬಲ ವಾಪಸ್​ ಪಡೆಯುವ ಸಾಧ್ಯತೆಯಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಇಂದೇ ಸರ್ಕಾರವನ್ನು ಕೆಡವುದಕ್ಕೆ ಮೂಹೂರ್ತ ಫಿಕ್ಸ್ ಆಗಿದೆಯಾ? ಇದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಅನ್ನೋ ಮಾಹಿತಿ ಲಭ್ಯವಾಗಿದೆ..!

Share News

About admin

Check Also

ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಉಸ್ತುವಾರಿ ನೇಮಕ…

ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ …

Leave a Reply

Your email address will not be published. Required fields are marked *