ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ಮರವೇರಿ ಕುಳಿತು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಗರದ ಬಾಸೆಲ್ ಮಿಶನ್ ಶಾಲೆ ಬಳಿ ನಡೆದಿದೆ.ಮಾನಸಿಕ ಅಸ್ವಸ್ಥ ಎನ್ನಲಾದ ವ್ಯಕ್ತಿ ಏಕಾಏಕಿ ಶಾಲೆಯ ಪಕ್ಕದ ಮರವೇರಿ ಕುಳಿತು ಕೆಳಗೆ ಇಳಿಯಲು ಹಿಂದೇಟು ಹಾಕಿದ. ಇದರಿಂದ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ನಂತರ ಈ ಬಗ್ಗೆ ಸ್ಥಳೀಯರು ಉಪನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರವೇರಿದ್ದ ವ್ಯಕ್ತಿಗೆ ಕೆಳಗೆ ಇಳಿಯಲು ತಿಳಿಸಿದ್ದಾರೆ. ಆದರೆ ಆತ ಕೆಳಗೆ ಇಳಿಯಲು ಹಿಂದೇಟು ಹಾಕಿದ್ದಾನೆ.ಅಂತಿಮವಾಗಿ ಸ್ಥಳೀಯರ ಸಹಾಯದಿಂದ ಮರವೇರಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಆದರೆ ಮರವೇರಿ ಕುಳಿತ ವ್ಯಕ್ತಿಯ ಹೆಸರು ಹಾಗೂ ವಿಳಾಸ ತಿಳಿದು ಬಂದಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news





