ಕೋಲಾರ: ಕೋಲಾರದ ಕೆಜಿಎಫ್ ಪೊಲೀಸರು ಜಿಲ್ಲೆಯ ಕಾಮಸಮುದ್ರಂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಅಂತರರಾಜ್ಯ ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಂಧಿತ ಐವರು ತಮಿಳುನಾಡು ಮೂಲದವರಾಗಿದ್ದು, ನದೀಂ, ಮುನೀರ್, ಶ್ರೀಧರ್, ನದೀಂ ಹಾಗೂ ಜೈಪ್ರಕಾಶ್ ಎಂದು ಗುರುತಿಸಲಾಗಿದೆ.ಐವರು ಅಂತರರಾಜ್ಯ ದ್ವಿಚಕ್ರ ವಾಹನ ಚೋರರನ್ನು ಬಂಧಿಸಲಾಗಿದ್ದು, ಬಂಧಿತರಿಂದ 20 ಲಕ್ಷ ರುಪಾಯಿ ಮೌಲ್ಯದ 15 ಬೈಕ್ ಗಳು ವಶಕ್ಕೆ ಪಡೆಯಲಾಗಿದೆ.- ಕರ್ನಾಟಕದ ಕೋಲಾರ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ತಮಿಳುನಾಡಿನಲ್ಲಿ ಬೈಕ್ ಗಳನ್ನ ಕಳುವು ಮಾಡಿದ್ದರು.ಬಂಧಿತರು ಯಥೇಚ್ಛವಾಗಿ ಬುಲೆಟ್ ಸೇರಿದಂತೆ ಬೆಲೆ ಬಾಳುವ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕಳುವು ಮಾಡುತ್ತಿದ್ದರು ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





