ಕಳೆದ ಗುರುವಾರ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಇಬ್ಬರು ಸೈನಿಕರು ತಮ್ಮ ಮನೆಯ ವಸ್ತುಗಳನ್ನು ಗೋವಾ ಕೊಡುಗೆ ತೆಗೆದುಕೊಂಡು ಹೋಗುವಾಗ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳ್ಳರು ವಾಹನದಲ್ಲಿದ್ದ ವಿವಿಧ ಕಂಪನಿಯ ಸೈಕಲ್, ಮೋಟಾರ್, ಗೃಹ ಬಳಕೆ ವಸ್ತುಗಳು ಸುಮಾರು 15,50,000 ಮೌಲ್ಯದ ವಸ್ತುಗಳನ್ನು ಕೊಳ ತರ ಮಾಡಿರುವ ಬಗ್ಗೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇದೀಗ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿದ್ದು, ಆರೋಪಿಗಳಾದ ವಿಠ್ಠಲ್ ಎಂಬುವನಿಂದ ಗಂಜಿಗಟ್ಟು ಗ್ರಾಮದಲ್ಲಿ ಪತ್ತೆ ಹಚ್ಚಿ ವಾಹನದಲ್ಲಿದ್ದ ವಸ್ತುಗಳನ್ನು ಹಿಂಪಡೆದಿದ್ದಾರೆ. ಹುಬ್ಬಳ್ಳಿ ಧಾರವಾಡ ಸಿಬ್ಬಂದಿ ಹಾಗೂ ಅಧಿಕಾರಿಗಳು ಈ ಕಾರ್ಯಕ್ಕೆ ಪ್ರಶಂಸೆ ಪಡೆದಿದ್ದಾರೆ.
