Breaking News

ಆರ್‍ಟಿಓ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಹುಬ್ಬಳ್ಳಿ: ನಗರದ ಗಬ್ಬೂರು ಕ್ರಾಸ್‍ನಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಇತ್ತೀಚೆಗೆಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಸರ್ಕಾರದ ದಾಖಲೆಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಈ ಕುರಿತು ವಿಚಾರಣೆ ನಡೆಸಿದಾಗ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ದಾಖಲೆಗಳನ್ನು ಹೊಂದಿರುವದನ್ನು ದೃಢಪಡಿಸಿಕೊಂಡರು. ಬಳಿಕ ಸರ್ಕಾರಿ ಕಾರ್ಯದಲ್ಲಿ ಮಧ್ಯವರ್ತಿಗಳು ಅಡ್ಡಿ ಪಡಿಸುತ್ತಿರುವದರ ವಿರುದ್ಧಪೆÇಲೀಸರಿಗೆ ದೂರು ನೀಡಲು ಸೂಚಿಸಿದರು.ಈ ಹಿನ್ನೆಲೆಯಲ್ಲಿ ಸುರೇಶ ರಾಮಕೃಷ್ಣ ಘೋಡಕೆಹಾಗೂ ಸಾದಿಕ್ ಹುಸೇನ್ ರೆಹಮಾನ್ ಖಲೀಲ್ಅವರ ವಿರುದ್ಧ ಆರ್ ಟಿಓ ಕಚೇರಿಯ ಸಿಬ್ಬಂದಿನಿಂಗಪ್ಪ ಬಿಳ್ಳೂರ ಬೆಂಡಿಗೇರಿ ಪೆÇಲೀಸ್ ಠಾಣೆಯಲ್ಲಿದೂರು ನೀಡಿದ್ದರು. ನಂತರ ಭಾರತೀಯ ದಂಡಸಂಹಿತೆ 1861 ರ ಉಪಸೆಕ್ಷನ್ 186 ಪ್ರಕಾರ ದೂರುದಾಖಲಿಸಿಕೊಂಡ ಪೋಲೀಸರು ಆರೋಪಿಗಳನ್ನುಹುಬ್ಬಳ್ಳಿಯ ಜೆಎಂಎಫ್‍ಸಿ ಮೂರನೇನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *